ಬೆಂಗಳೂರು: ಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಮತ್ತು ವಕೀಲ ದೇವರಾಜೇಗೌಡ ಸುದ್ದಿಗೋಷ್ಠಿ ನಡೆಸಿದ್ದು, ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಮೂರು ದಿನದ ಹಿಂದೆ ಡಿಸಿಎಂ ಡಿ.ಕೆ. ಶಿವಕುಮಾರ್ ನನಗೆ ಕರೆ ಮಾಡಿದ್ದರು. ಸಂಧಾನಕ್ಕೆ ಶಿವರಾಮೇಗೌಡರನ್ನು ಕಳುಹಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.
ನನಗೆ ರಾತ್ರಿ 12:40ಕ್ಕೆ ಡಿ.ಕೆ. ಶಿವಕುಮಾರ್ ಕರೆ ಮಾಡಿದ್ದರು. ಮೋದಿ ಹಸ್ತಕ್ಷೇಪ ಇದೆ ಎಂದು ಸಾಬೀತು ಮಾಡುವುದೇ ಕಾಂಗ್ರೆಸ್ ನವರ ಗುರಿ ಆಗಿತ್ತು. ಈ ಪ್ರಕರಣದ ಬಗ್ಗೆ ದೇಶಾದ್ಯಂತ ಪ್ರಚಾರ ಮಾಡುವ ಉದ್ದೇಶ ಹೊಂದಿದ್ದಾರೆ. ಅದಕ್ಕಾಗಿ ಕೈಜೋಡಿಸಬೇಕು ಎಂದು ನನ್ನ ಕರೆದಿದ್ದರು. 10ಕ್ಕೂ ಹೆಚ್ಚು ಬಾರಿ ಶಿವರಾಮೇಗೌಡ ನನ್ನನ್ನು ಭೇಟಿಯಾಗಿದ್ದಾರೆ. ಒಂದೊಂದು ಟೈಮಲ್ಲಿ ಒಂದೊಂದು ರೀತಿ ನನ್ನ ಜೊತೆ ಮಾತನಾಡಿದ್ದಾರೆ. ಈ ಕೇಸ್ ನಲ್ಲಿ ಯಾರನ್ನು ಸಿಕ್ಕಿಹಾಕಿಸಬೇಕೆಂದು ಮೊದಲೇ ನಿರ್ಧಾರ ಮಾಡಿದ್ದಾರೆ. ಮೋದಿ, ಹೆಚ್.ಡಿ.ಕೆ. ಮುಗಿಸಬೇಕು ಎಂಬುದು ಇವರ ಲೆಕ್ಕಾಚಾರವಾಗಿದೆ ಎಂದು ಹೇಳಿದ್ದಾರೆ.
ನಾನೇ ನನ್ನ ಮನೆಯ ವಿಳಾಸ ನೀಡುತ್ತೇನೆ. ಡಿಸಿಎಂ ಡಿಕೆಶಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಗರಡಿಯಲ್ಲೇ ಬೆಳೆದವನು ನಾನು. ಈ ಪ್ರಕರಣವನ್ನು ಸಿಬಿಐಗೆ ನೀಡಬೇಕು. ಬೇಕಿದ್ದರೆ ಮಾನನಷ್ಟ ಮೊಕದ್ದಮೆ ಹೂಡಲಿ ಎಂದು ಹೇಳಿದ್ದಾರೆ.
ಡಿಕೆ ಮೇಲೆ ಮಾಡಿದ ಆರೋಪ ಡಿಲೀಟ್ ಮಾಡಿ ಎಂದು ಎಸ್ಐಟಿ ಎಸ್ಪಿಯವವರೇ ನನಗೆ ಹೇಳಿದ್ದರು. ನಾನು ನೀಡಿದ್ದ ಹೇಳಿಕೆ ಬದಲಿಸಲು ತಿಳಿಸಿದ್ದರು. ಚಾಲಕ ಎಲ್ಲಿದ್ದಾನೆ ಅಂತ ಆ ಆಡಿಯೋದಲ್ಲಿ ಇದೆ ಎಂದು ಡಿಸಿಎಂ ಮಾತನಾಡಿರುವ ಆಡಿಯೋವನ್ನು ವಕೀಲ ದೇವರಾಜೇಗೌಡ ಬಿಡುಗಡೆ ಮಾಡಿದ್ದಾರೆ.
ಶಿವರಾಮೇಗೌಡ ಮೊದಲು ಮಾತನಾಡಿದರು. ಆಮೇಲೆ ಡಿಸಿಎಂ ಡಿ.ಕೆ. ಶಿವಕುಮಾರ್ ಗೆ ಫೋನ್ ಕೊಟ್ಟರು. ಶಿವರಾಮೇಗೌಡರಿಂದ ಆಡಿಯೋದಲ್ಲಿ ಭರವಸೆ ನೀಡಲಾಗಿದೆ. ಬಿಡುಗಡೆಯಾದ ಆಡಿಯೋದಲ್ಲಿ ಯಾರು ಮಾತನಾಡಿದ್ದಾರೆ ಗೊತ್ತಾಯಿತಲ್ವಾ? ಇದರಲ್ಲಿ ಯಾರ ಪಾತ್ರ ಇದೆ ಎನ್ನುವುದು ಗೊತ್ತಾಯಿತಲ್ಲವೇ? ನಾನು ಸಿಬಿಐಗೆ ದೂರು ಕೊಡುತ್ತೇನೆ. ಎಸ್ಐಟಿ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ.
ಬೇರೆ ಬೇರೆ ಹುದ್ದೆ ಕೊಡುತ್ತೇವೆ ಎಂದು ಡಿಕೆ ನನಗೆ ಆಫರ್ ಕೊಟ್ಟರು. ಕ್ಯಾಬಿನೆಟ್ ರ್ಯಾಂಕ್ ಪೋಸ್ಟ್ ಕೊಡುತ್ತೇವೆ ಎಂದು ಆಫರ್ ಕೊಟ್ಟರು. ಇದರ ಮಾಸ್ಟರ್ ಮೈಂಡ್ ಡಿಸಿಎಂ ಡಿ.ಕೆ. ಶಿವಕುಮಾರ್. ಇದರ ಹಿಂದೆ ಬೇರೆ ಯಾರೂ ಇಲ್ಲ ಎಂದು ಆರೋಪಿಸಿದ್ದಾರೆ.
ಕಾರ್ತಿಕ್ ತಮ್ಮನನ್ನು ಭೇಟಿ ಮಾಡಿದ ವಿಡಿಯೋ ರಿಲೀಸ್ ಮಾಡಿದ್ದಾರೆ. ಪೆನ್ ಡ್ರೈವ್ ಕಥಾ ನಾಯಕರೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು. ಡಿ.ಕೆ. ಶಿವಕುಮಾರ್ ಅವರೇ ಇದರ ರೂವಾರಿ ಕಥಾನಾಯಕ. ಇನ್ನೊಬ್ಬ ನಾಯಕರ ಆಡಿಯೋ ಸಹ ಇದೆ. ನನ್ನ ಮೇಲೆ ಕೇಸ್ ಹಾಕಲು ಈಗ ಹೊರಟಿದ್ದಾರೆ. ಡಿಸಿಎಂ ಅವರು ಮಾತುಕತೆಗೆ ನನ್ನ ಬಳಿ ಕೆಲವು ಜನರನ್ನು ಕಳಿಸಿದ್ದರು. ಪೆನ್ ಡ್ರೈವ್ ಒಬ್ಬ ಮಹಾ ನಾಯಕನ ಬಳಿ ಹೋಗಿತ್ತು ಎಂದು ಹೇಳಿದ್ದಾರೆ.
ಕೆಲವು ಕಿಡಿಗೇಡಿ ರಾಜಕಾರಣಿಗಳು ವಿಡಿಯೋಗಳನ್ನು ಅಸ್ತ್ರ ಮಾಡಿಕೊಂಡಿದ್ದಾರೆ. ಎಸ್ಐಟಿ ಅಧಿಕಾರಿಗಳನ್ನು ನಾನು ಎರಡು ಬಾರಿ ಭೇಟಿಯಾಗಿದ್ದೇನೆ. ಅವರಲ್ಲಿ ಕೆಲವು ಕಹಿ ಸತ್ಯಗಳನ್ನು ಹೇಳಿದ್ದೇನೆ. ಬ್ಲರ್ ಮಾಡದೇ ಕೆಲವು ವಿಡಿಯೋ ಹರಿಬಿಟ್ಟಿದ್ದಾರೆ. ಎಸ್ಐಟಿ ಕ್ರಮ ಕೈಗೊಂಡಿದ್ದರೆ ವಿಡಿಯೋ ಹೇಗೆ ರಿಲೀಸ್ ಆಗುತ್ತಿತ್ತು? ಮೂರು ದಿನದಿಂದ ಸರಿಯಾದ ತನಿಖೆ ಆಗುತ್ತಲೇ ಇಲ್ಲ. ಸಣ್ಣಕ್ಕೆ ಇರುವ ಆಫೀಸರ್ ನನಗೆ ವಿಶ್ವಾಸ ಹೋಗುವಂತೆ ಮಾತನಾಡಿದರು. ಡಿಸಿಎಂ ಡಿಕೆ ಬಗ್ಗೆ ನಾನು ಕೊಟ್ಟ ಹೇಳಿಕೆ ಡಿಲೀಟ್ ಮಾಡೋಣ ಎಂದು ಆರೋಪಿಸಿದ್ದಾರೆ ಡಿಸಿಎಂ ಡಿಕೆಶಿಗೆ ಕಾರ್ತಿಕ್ ಪೆನ್ ಡ್ರೈವ್ ನೀಡಿದ್ದಾನೆ. ಎಲ್ಲದರ ರೂವಾರಿ ಪೆನ್ ಡ್ರೈವ್ ಹಂಚಿಕೆ ಸೂತ್ರಧಾರಿ ಡಿಕೆ ಮತ್ತು ಕಾಂಗ್ರೆಸ್ ಪಕ್ಷ. ನನಗೆ ಧಮ್ಕಿ ಸಹ ಹಾಕಲಾಗಿದೆ ಎಂದು ಹೇಳಿದ್ದಾರೆ.