ರೋಗಿಗಳಿಗೆ ಅಧಿಕ ಪ್ರಮಾಣದ ಇನ್ಸುಲಿನ್ ನೀಡಿ ಅವರ ಸಾವಿಗೆ ಕಾರಣವಾದ ಆರೋಪದ ಮೇಲೆ ಅಮೆರಿಕದ ಪೆನ್ಸಿಲ್ವೇನಿಯಾ ನರ್ಸ್ ಗೆ ನ್ಯಾಯಾಲಯ ಕನಿಷ್ಠ 380 ರಿಂದ ಗರಿಷ್ಠ 760 ರವರೆಗೆ ಜೈಲು ಶಿಕ್ಷೆ ನಡೆದಿದೆ.
41 ವರ್ಷದ ಹೀದರ್ ಪ್ರೆಸ್ಡೀ ಎಂಬ ನರ್ಸ್ ಹಲವಾರು ರೋಗಿಗಳಿಗೆ ಮಾರಣಾಂತಿಕ ಪ್ರಮಾಣದ ಇನ್ಸುಲಿನ್ ನೀಡುವುದಕ್ಕಾಗಿ ಸತತ ಮೂರು ಜೀವಾವಧಿ ಶಿಕ್ಷೆಗೆ ಒಳಪಟ್ಟಿದ್ದಾರೆ. ಪ್ರೆಸ್‌ಡೀ ಕಳೆದ ವಾರ ಮೂರು ಕೊಲೆ ಮತ್ತು ಇತರರಿಗೆ ಹೆಚ್ಚು ಪ್ರಮಾಣದ ಇನ್ಸುಲಿನ್ ನೀಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.
ಪಿಟ್ಸ್ ಬರ್ಗ್‌ನ ಬಟ್ಲರ್ ಕೌಂಟಿಯ ನ್ಯಾಯಾಲಯದಲ್ಲಿ ಆಕೆಯ ವಿಚಾರಣೆಯನ್ನು ನಡೆಸಲಾಯಿತು. 2020 ರಿಂದ 2023 ರ ನಡುವೆ ಐದು ಆರೋಗ್ಯ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಕನಿಷ್ಠ 17 ರೋಗಿಗಳ ಸಾವಿಗೆ ಕಾರಣಳಾಗಿದ್ದಾಳೆ. ಸುಮಾರು 43 ರಿಂದ 104 ರ ವಯಸ್ಸಿನವರ ಪ್ರಾಣ ತೆಗೆದಿರೋದು ಗೊತ್ತಾಗಿದೆ. ನರ್ಸ್ ಹೀದರ್ ಪ್ರೆಸ್ಡೀಗೆ ರೋಗಿಗಳನ್ನು ಕಂಡರೆ ಆಗುತ್ತಿರಲಿಲ್ಲ. ಅವರನ್ನು ಬೈಯುತ್ತಾ ದ್ವೇಷ ಮಾಡುತ್ತಿದ್ದಳೆಂದು ನರ್ಸ್ ನ ಸಹೋದ್ಯೋಗಿಗಳು ಹೇಳಿದ್ದಾರೆ.
ನರ್ಸ್ ಹೀದರ್ ಪ್ರೆಸ್‌ಡೀ ಮಧುಮೇಹಿಗಳು ಸೇರಿದಂತೆ 22 ರೋಗಿಗಳಿಗೆ ಹೆಚ್ಚಿನ ಪ್ರಮಾಣದ ಇನ್ಸುಲಿನ್ ನೀಡಿದ್ದಾರೆ ಎಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿದರು.
ಆರೋಪಿ ನರ್ಸ್ ಪ್ರೆಸ್‌ಡೀ ರಾತ್ರಿಯ ಪಾಳಿಯಲ್ಲಿ ಸಾಮಾನ್ಯವಾಗಿ ಇನ್ಸುಲಿನ್ ನೀಡುತ್ತಿದ್ದರು. ಆಸ್ಪತ್ರೆಯಲ್ಲಿನ ಕಡಿಮೆ ಸಿಬ್ಬಂದಿಯ ಲಾಭ ಪಡೆದು ತುರ್ತುಸ್ಥಿತಿ ಎದುರಾದ ತಕ್ಷಣದ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಸೇರಿಸಲಾಗಲ್ಲ ಎಂಬುದನ್ನು ಅರಿತುಕೊಂಡಿದ್ದಳು. ಹೆಚ್ಚಿನ ರೋಗಿಗಳು ಇನ್ಸುಲಿನ್ ಪ್ರಮಾಣವನ್ನು ಸ್ವೀಕರಿಸಿದ ನಂತರ ಅಥವಾ ಸ್ವಲ್ಪ ಸಮಯದ ನಂತರ ನಿಧನರಾದರು. ಆರಂಭಿಕ ಹಂತದಲ್ಲಿ ಆರೋಪಗಳು ಕೇಳಿಬಂದ ನಂತರ ಆಕೆಯ ನರ್ಸಿಂಗ್ ಪರವಾನಗಿಯನ್ನು ಕಳೆದ ವರ್ಷದ ಆರಂಭದಲ್ಲಿ ಅಮಾನತುಗೊಳಿಸಲಾಯಿತು. ಆಕೆಗೆ ಮರಣದಂಡನೆ ವಿಧಿಸಬೇಕೆಂಬ ಕೂಗು ಕೇಳಿಬರುತ್ತಿದೆ.