50 ದಿನದ ಸಂಭ್ರಮದಲ್ಲಿ ‘ಕೆರೆ ಬೇಟೆ’

ರಾಜ್ ಗುರು ನಿರ್ದೇಶನದ ಗೌರಿಶಂಕರ್ ಅಭಿನಯದ ಕೆರೆ ಬೇಟೆ ಚಿತ್ರ ಮಾರ್ಚ್ 15 ರಂದು ರಾಜ್ಯದ್ಯಂತ ತೆರೆ ಕಂಡಿತ್ತು, ಹಳ್ಳಿ ಸೊಗಡಿನ ಈ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುವ ಮೂಲಕ  ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿತ್ತು ಕೆರೆ ಬೇಟೆ ಇದೀಗ 50 ದಿನಗಳನ್ನು ಪೂರೈಸಿ ಭರ್ಜರಿಯಾಗಿ ಮುನ್ನುಗ್ಗುತ್ತಲೇ ಇದೆ.

ಈ ಚಿತ್ರವನ್ನು ಜನಮನ ಸಿನಿಮಾಸ್ ಬ್ಯಾನರ್ ನಲ್ಲಿ ಜೈ ಶಂಕರ್ ಪಾಟೀಲ್ ನಿರ್ಮಾಣ ಮಾಡಿದ್ದು, ಗೌರಿಶಂಕರ್ ಗೆ ಜೋಡಿಯಾಗಿ ಬಿಂದು ಶಿವರಾಮ್  ಅಭಿನಯಿಸಿದ್ದಾರೆ.  ಗೋಪಾಲ್ ದೇಶಪಾಂಡೆ, ಸಂಪತ್ ಮೈತ್ರಿಯ, ಹರಿಣಿ ಶ್ರೀಕಾಂತ್, ಚಿಲ್ಲರ್ ಮಂಜು, ರಾಕೇಶ್ ಪೂಜಾರಿ, ವರ್ಧನ್ ತೀರ್ಥಹಳ್ಳಿ, ರಾಮದಾಸ್, ರಘು ರಾಜನಂದ, ಮತ್ತು ಶೇಖರ್ ಉಳಿದ ಪಾತ್ರವರ್ಗದಲ್ಲಿದ್ದಾರೆ.  ಜ್ಞಾನೇಶ್ ಬಿ ಮಾತಾಡ್ ಸಂಕಲನ,  ಕೀರ್ತನ್ ಪೂಜಾರಿ  ಛಾಯಾಗ್ರಹಣ, ಟೈಗರ್ ಶಿವು ಮತ್ತು ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನವಿದೆ. ಗಗನ್ ಸಂಗೀತ ಸಂಯೋಜನೆ ನೀಡಿದ್ದಾರೆ.

https://twitter.com/A2MusicSouth/status/1786706241143623779

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read