HomeKarnatakaಮೀನು ತಿಂದು ಇಬ್ಬರು ಸಾವು: 15ಕ್ಕೂ ಹೆಚ್ಚು ಜನರು ಅಸ್ವಸ್ಥ

ಮೀನು ತಿಂದು ಇಬ್ಬರು ಸಾವು: 15ಕ್ಕೂ ಹೆಚ್ಚು ಜನರು ಅಸ್ವಸ್ಥ

ಹಾಸನ: ಕೆರೆ ಮೀನು ತಿಂದು ಇಬ್ಬರು ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಸವನಹಳ್ಳಿಯಲ್ಲಿ ನಡೆದಿದೆ.

ಬಸವನಹಳ್ಳಿ ಗ್ರಾಮದ ರವಿಕುಮಾರ್ (46), ಮೈಸೂರು ಜಿಲ್ಲೆಯ ಕೆ.ಆರ್.ನಗರದ ಪುಟ್ಟಮ್ಮ (50) ಮೃತರು. ಅಸ್ವಸ್ಥಗೊಂಡಿರುವ 15 ಜನರನ್ನು ಅರಕಲಗೂಡು ಹಾಗೂ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ತೀವ್ರ ಬರಗಾಲ ಹಿನ್ನೆಲೆಯಲ್ಲಿ ಕೆರೆ ನೀರಿಲ್ಲದೇ ಬತ್ತಿ ಹೋಗಿತ್ತು. ಬರಿದಾಗಿದ್ದ ಕೆರೆಯ ಕೆಸರಿನಲ್ಲಿದ್ದ ಮೀನು ಹಿಡಿದು ಗ್ರಾಮಸ್ಥರು ಅಡುಗೆ ಮಾಡಿ ಸೇವಿಸಿದ್ದಾರೆ. ಮೀನಿನ ಅಡುಗೆ ಸೇವಿಸಿದ ಬಳಿಕ ವಾಂತಿ, ಭೇದಿ ಶುರುವಾಗಿದ್ದು, 15ಕ್ಕೂ ಹೆಚ್ಚು ಜನರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಮೀನು ತಿಂದಿದ್ದ ರವಿಕುಮಾರ್, ಪುಟ್ಟಮ್ಮ ಸಾವನ್ನಪ್ಪಿದ್ದಾರೆ. 15 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೃತ ಪುಟ್ಟಮ್ಮ ತವರುಮನೆಗೆಂದು ಬಸವನಹಳ್ಳಿ ಗ್ರಾಮಕ್ಕೆ ಬಂದಿದ್ದರು. ಈ ವೇಳೆಯೇ ಈ ದುರಂತ ಸಂಭವಿಸಿದೆ. ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular