ಲಂಡನ್ ಬಸ್ ಮೇಲೆ ಕೇರಳ ಪ್ರವಾಸೋದ್ಯಮದ ಜಾಹೀರಾತು; ವಿಡಿಯೋ ವೈರಲ್

ಪ್ರವಾಸೋದ್ಯಮವನ್ನು ಉತ್ತೇಜಿಸಲು ರಾಜ್ಯಗಳು ಜಾಹೀರಾತು ನೀಡುವುದು ಸಾಮಾನ್ಯ. ದೇಶದೊಳಗಿನ ನೆರೆಹೊರೆಯ ರಾಜ್ಯಗಳಲ್ಲಿ ಪರಸ್ಪರ ಇಂತಹ ಜಾಹೀರಾತುಗಳ ಪ್ರದರ್ಶನ ಪ್ರವಾಸೋದ್ಯಮದ ಉತ್ತೇಜನಕ್ಕೆ ಸಹಕಾರಿಯಾಗಿದೆ.

ಅದಾಗ್ಯೂ ಇಂತಹ ಜಾಹೀರಾತುಗಳು ಹೊರದೇಶಗಳಲ್ಲಿ ಕಂಡರೆ ಅದು ನಿಜಕ್ಕೂ ಅಚ್ಚರಿ. ಕೇರಳದ ಪ್ರವಾಸೋದ್ಯಮವನ್ನು ಉತ್ತೇಜಿಸುವ ಜಾಹೀರಾತು ಬಹುದೂರದ ಲಂಡನ್ ನಲ್ಲಿ ಕಾಣಿಸಿಕೊಂಡಿದ್ದು ದೇವರ ನಾಡಿನ ಜನರು ಸೇರಿದಂತೆ ಭಾರತೀಯರು ಹೆಮ್ಮೆ ಪಡುವುದರೊಂದಿಗೆ ರೋಮಾಂಚನಗೊಳಿಸಿದೆ.

ಲಂಡನ್ ನ ರಸ್ತೆಗಳಲ್ಲಿ ಸಂಚರಿಸುವ ಡಬಲ್ ಡೆಕ್ಕರ್ ಬಸ್‌ಗಳ ಮೇಲೆ ಕೇರಳ ಪ್ರವಾಸೋದ್ಯಮ ಬಗ್ಗೆ ಜಾಹೀರಾತು ಕಾಣಿಸಿದೆ. ಇನ್ ಸ್ಟಾಗ್ರಾಂ ಬಳಕೆದಾರರೊಬ್ಬರು,‌ ಇಡೀ ಬಸ್ ಕೇರಳದ ಹಿನ್ನೀರಿನ ದೃಶ್ಯಗಳಿಂದ ಹೇಗೆ ಆವರಿಸಲ್ಪಟ್ಟಿದೆ ಎಂಬುದನ್ನು ತೋರಿಸಲು ಬಸ್ಸಿನ ಪಕ್ಕದಲ್ಲಿ ನಡೆಯುತ್ತಾ, ಮಲಯಾಳಂ ಹಾಡನ್ನು ಗಟ್ಟಿಯಾಗಿ ಹಾಡುತ್ತಾ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಗಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read