HomeKarnatakaಸ್ವಂತ ತಂದೆಗೆ ಆಶ್ರಯ ಕೊಡದ ಕುಮಾರ್ ಬಂಗಾರಪ್ಪರಿಂದ ನೀತಿ ಪಾಠ ಸಲ್ಲದು: ಬೇಳೂರು ಗೋಪಾಲಕೃಷ್ಣ

ಸ್ವಂತ ತಂದೆಗೆ ಆಶ್ರಯ ಕೊಡದ ಕುಮಾರ್ ಬಂಗಾರಪ್ಪರಿಂದ ನೀತಿ ಪಾಠ ಸಲ್ಲದು: ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ: ‘ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಿಗೆ ಆಶ್ರಯ ಕೊಡಲಾಗದ ಕುಮಾರ್ ಬಂಗಾರಪ್ಪ ಅವರು, ಸ್ವಂತ ತಂದೆಯನ್ನು ಮನೆಯಿಂದ ಹೊರ ದೂಡಿದರು. ಇಂತವರಿಂದ ನೀತಿ ಪಾಠದ ಅವಶ್ಯಕತೆ ನನಗಿಲ್ಲ’ ಎಂದು ಸಾಗರ ಕ್ಷೇತ್ರದ ಶಾಸಕ ಗೋಪಾಲ ಕೃಷ್ಣ ಬೇಳೂರು ವಾಗ್ದಾಳಿ ನಡೆಸಿದ್ದಾರೆ‌.

ಸಾಗರ ತಾಲ್ಲೂಕಿನ ಆವಿನಳ್ಳಿಯಲ್ಲಿ ಬುಧವಾರ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರ ಮತಯಾಚನೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಇತ್ತೀಚೆಗೆ ಮಾಧ್ಯಮಗಳ ಎದುರು ‘ಬಂಗಾರಪ್ಪ ಅವರ ಹಾಗೆ ಕನ್ನಡಕ ಧರಿಸಿದರೆ, ಗೋಪಾಲ ಕೃಷ್ಣ ಬೇಳೂರು ಅವರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಆಗಲ್ಲ ಎಂದು ಟೀಕಿಸಿದ್ದಾರೆ. ಹೌದು. ‘ನಾನು ಬಂಗಾರಪ್ಪ ಆಗುವುದಕ್ಕೆ ಸಾಧ್ಯವಿಲ್ಲ, ಆದರೆ, ಬಂಗಾರಪ್ಪ ಅವರ ನಿಷ್ಠಾವಂತ ಶಿಷ್ಯನಾಗುತ್ತೇನೆ. ಈ ಸ್ಥಾನ ಪಡೆಯಲು ಕುಮಾರ್ ಬಂಗಾರಪ್ಪ ಅವರಿಂದ ಸಾಧ್ಯವೆ ಎಂದು ಪ್ರಶ್ನಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕುಮಾರ್ ಬಂಗಾರಪ್ಪ ಅವರಲ್ಲಿ ‘ಬಂಗಾರಪ್ಪ’ ಎನ್ನುವ ಹೆಸರು ಕಿತ್ತು ಬದಿಗಿಟ್ಟರೆ, ಅವರದು ನಾಯಿ ಪಾಡಾಗಲಿದೆ. ಬಂಗಾರಪ್ಪ ಅವರು ನಿಧನ ಹೊಂದಿದಾಗ ಸ್ವಂತ ತಂದೆಯ ಪಾರ್ಥೀವ ಶರೀರ ಹೊರುವ ಸೌಭಾಗ್ಯ ಕೂಡ ಅವರಿಗೆ ಸಿಗಲಿಲ್ಲ. ಆದರೆ, ಇಲ್ಲಿ ಬಂಗಾರಪ್ಪ ಅವರ ಪಾರ್ಥೀವ ಶರೀಕಕ್ಕೆ ನಾನು ಹೆಗಲು ಕೊಟ್ಟಿದ್ದೇನೆ. ಇದು ನನ್ನ ಸೌಭಾಗ್ಯ ಎಂದರು.

ಹಿಂದೆಲ್ಲಾ ಮಾಜಿ ಶಾಸಕ ಹಾಲಪ್ಪ ಕೂಡ ಇದೇ ರೀತಿ ನಾಲಿಗೆ ಹರಿ ಬಿಡುತ್ತಿದ್ದರು. ಕ್ಷೇತ್ರದ ಜನರು ಬಾಲ ಬಿಚ್ಚದಂತೆ ಮಾಡಿದ್ದಾರೆ. ಕುಮಾರ್ ಬಂಗಾರಪ್ಪ ಎಚ್ಚರಿಕೆಯಿಂದ ವರ್ತಿಸಬೇಕು ಎಂದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular