ಬೇಸಿಗೆಯಲ್ಲಿ ಕಲ್ಲಂಗಡಿ ಹೇಳಿ ಮಾಡಿಸಿದಂತಿರುತ್ತದೆ. ದೇಹದಲ್ಲಿ ತಂಪು ಕಾಯ್ದುಕೊಳ್ಳಲು ಜನರು ಕಲ್ಲಂಗಡಿ ತಿನ್ನಲು ಇಷ್ಟಪಡುತ್ತಾರೆ. ಈ ಹಣ್ಣಿನಲ್ಲಿ ನೀರಿನ ಅಂಶ ಸಾಕಷ್ಟಿರುತ್ತದೆ. ಆದರೆ ಸಾಮಾನ್ಯವಾಗಿ ಎಲ್ಲರೂ ಕಲ್ಲಂಗಡಿ ಸಿಪ್ಪೆಯನ್ನು ಎಸೆಯುತ್ತಾರೆ. ಬೇಸಿಗೆಯಲ್ಲಿ ಕಲ್ಲಂಗಡಿ ಸಿಪ್ಪೆಯಿಂದಲೂ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು.
ಮುಖದ ಸೌಂದರ್ಯ
ಕಲ್ಲಂಗಡಿ ಹಣ್ಣಿನ ಸಿಪ್ಪೆ ಮುಖದ ಸೌಂದರ್ಯವನ್ನು ಹೆಚ್ಚಿಸಬಲ್ಲದು. ಸಿಪ್ಪೆಯ ರಸವನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮ ಮೃದುವಾಗುತ್ತದೆ.
ರೋಗಕ್ಕೆ ಪ್ರತಿರಕ್ಷೆ
ಕಲ್ಲಂಗಡಿ ಸಿಪ್ಪೆಯನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು, ನಂತರ ಅದರಿಂದ ವಿವಿಧ ಖಾದ್ಯಗಳನ್ನು ಮಾಡಿ ತಿನ್ನಬಹುದು. ಇದನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿಯು ಗಮನಾರ್ಹವಾಗಿ ಹೆಚ್ಚಾಗುತ್ತದೆ. ದೇಹಕ್ಕೆ ಸಾಕಷ್ಟು ವಿಟಮಿನ್‌ಗಳು ಸಿಗುತ್ತದೆ. ದೇಹವನ್ನು ಅನೇಕ ಸೋಂಕುಗಳಿಂದ ರಕ್ಷಿಸಲು ಅವು ಸಹಾಯ ಮಾಡುತ್ತವೆ.
ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
ರಕ್ತದೊತ್ತಡವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಕಲ್ಲಂಗಡಿ ಸಿಪ್ಪೆಯನ್ನು ಬೇಯಿಸಿ ತಿನ್ನಬೇಕು. ಸಿಪ್ಪೆಯಲ್ಲಿ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಕಂಡುಬರುತ್ತದೆ. ಒತ್ತಡವನ್ನು ಎದುರಿಸುತ್ತಿದ್ದರೆ ಅದನ್ನು ಗುಣಪಡಿಸಲು ಇದು ಉಪಯುಕ್ತವಾಗಿದೆ. ಹೃದಯದ ಆರೋಗ್ಯವನ್ನು ಸಹ ಕಾಪಾಡಬಲ್ಲದು.
ತೂಕ ಇಳಿಕೆ
ತಪ್ಪು ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಜನರು ತೂಕ ಹೆಚ್ಚಾಗುವಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕಲ್ಲಂಗಡಿ ಹಣ್ಣಿನ ಸಿಪ್ಪೆಯನ್ನು ಸೇವಿಸುವ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಸಿಪ್ಪೆಗಳಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಕಂಡುಬರುತ್ತದೆ. ಚಯಾಪಚಯವನ್ನು ಸುಧಾರಿಸಲು ಸಿಪ್ಪೆಗಳು ಬಹಳ ಪ್ರಯೋಜನಕಾರಿ. ಇದನ್ನು ಸೇವಿಸುವುದರಿಂದ ಹೊಟ್ಟೆ ತುಂಬಿರುತ್ತದೆ.
ಹೊಟ್ಟೆ ಸಮಸ್ಯೆಗಳಿಗೆ ಪರಿಹಾರ
ಹೋಟೆಲ್, ರೆಸ್ಟೋರೆಂಟ್ ಅಥವಾ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕಲ್ಲಂಗಡಿ ಸಿಪ್ಪೆಯನ್ನು ಸೇವಿಸುವುದರಿಂದ ಈ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಮಲಬದ್ಧತೆಯಿಂದಲೂ ಪರಿಹಾರ ಪಡೆಯಬಹುದು.