ಶಿರಸಿ: ಇದು ಚುನಾವಣೆ ಸಭೆಯೋ ಗೆಲುವಿನ ಸಭೆಯೋ ಎಂದೂ ಗೊತ್ತಾಗುತ್ತಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ಹಿನ್ನಲೆಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ, ಶಿರಸಿ ಮಾರಿಕಾಂಬ ಮತ್ತು ವಾದಿರಾಜ ತೀರ್ಥರನ್ನು ಸ್ಮರಿಸಿದ್ದಾರೆ.
15 ವರ್ಷಗಳ ಹಿಂದೆ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ನಾನು ಇಲ್ಲಿಗೆ ಬಂದಿದ್ದೆ. ಆಗಿನಿಂದಲೂ ಈಗಿನವರೆಗೂ ನೀವು ನನ್ನನ್ನು ಬರಿಗೈಯಲ್ಲಿ ಕಳುಹಿಸಿಲ್ಲ. ನಾನು ಬಯಸಿದ್ದು, ಕೇಳಿದ್ದು ಎಲ್ಲವನ್ನು ನೀವು ಕೊಟ್ಟಿದ್ದೀರಿ. ನನಗಾಗಿ ಬಿಸಿಲಿನಲ್ಲಿ ಬಂದು ಕಾದು ಕುಳಿತಿದ್ದೀರಿ ಇದು ಸಣ್ಣ ಕೆಲಸವಲ್ಲ. ಕರ್ನಾಟಕದಲ್ಲಿ ಬಿಜೆಪಿಗೆ ಅದ್ಭುತ ಜಯ ಸಿಗಲಿದೆ. ಈ ರೀತಿ ಇಲ್ಲಿನ ವಾತಾವರಣವನ್ನು ನೀವು ಬದಲಾಯಿಸಿದ್ದೀರಿ ಎಂದು ಹೇಳಿದ್ದಾರೆ.