ಸಿಎಂ ವಿಜಯ್ ನಿರ್ದೇಶನದ ‘ಉಸಿರೇ.. ಉಸಿರೇ…’ ಚಿತ್ರದ ‘ನೆನಪೇ ನೆನಪೇ’ ಎಂಬ ಮೆಲೋಡಿ ಹಾಡನ್ನು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ರಾಜೇಶ್ ಕೃಷ್ಣನ್ ಧ್ವನಿಯಾಗಿದ್ದು, ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜನ ನೀಡಿದ್ದಾರೆ. ಯೋಗರಾಜ್ ಭಟ್ ಸಾಹಿತ್ಯವಿದೆ.
ಈ ಚಿತ್ರವನ್ನು ಗೊಂಬೆ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಪ್ರದೀಪ್ ಯಾದವ್ ನಿರ್ಮಾಣ ಮಾಡಿದ್ದು, ರಾಜೀವ್ ಅನು, ಮತ್ತು ಶ್ರೀಜಿತಗೋಷ್, ಸುಚೇಂದ್ರ ಪ್ರಸಾದ್, ತಾರಾ, ರಾಜೇಶ್ ನಟರಂಗ, ಸಾಧುಕೋಕಿಲ, ದೇವರಾಜ್, ಬ್ರಹ್ಮಾನಂದಂ, ಮಂಜು ಪಾವಗಡ, ಜಗ್ಗಪ್ಪ, ಸುಶ್ಮಿತಾ, ಸೀತಾರಾಮ, ನಿಕಿತಾ, ವಿಜಯ್ ಪ್ರೀತಮ್, ತಾರಾ ಬಳಗದಲ್ಲಿದ್ದಾರೆ. ಕೆ ಎಂ ಪ್ರಕಾಶ್ ಸಂಕಲನ, ಮಂಜು ಛಾಯಗ್ರಹಣ, ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜನೆ ನೀಡಿದ್ದಾರೆ.