ಭೋಪಾಲ್(ಮಧ್ಯಪ್ರದೇಶ): ಕೆಲವೇ ಗಂಟೆಗಳ ಮೊದಲು ವಿವಾಹವಾದ ತನ್ನ ಪತ್ನಿಯ ಅಶ್ಲೀಲ ವೀಡಿಯೊ ಪ್ರಸಾರ ಮಾಡಿದ ವ್ಯಕ್ತಿ ಮತ್ತು ಆತನ ಸಂಬಂಧಿಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಸಾರ ಮಾಡಿದ ವ್ಯಕ್ತಿಗೆ ಆ ವಿಡಿಯೋ ಕಳಿಸಿದ್ದು ಆತನ ಪತ್ನಿಯೊಂದಿಗೆ ಈ ಮೊದಲು ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ. ಅವಳು ಯುವಕನನ್ನು ಮದುವೆಯಾಗಲು ನಿರಾಕರಿಸಿದ್ದಳು ಎಂದು ಐಶ್‌ಬಾಗ್ ಪೊಲೀಸರು ತಿಳಿಸಿದ್ದಾರೆ.
ಐಶ್‌ಬಾಗ್‌ನಲ್ಲಿ ನೆಲೆಸಿರುವ 19 ವರ್ಷದ ಯುವತಿಗೆ 22 ವರ್ಷದ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಆಕೆ ಮತ್ತೊಬ್ಬ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಆತನನ್ನೇ ಮದುವೆಯಾಗಿದ್ದಾಳೆ.
ಫೆಬ್ರವರಿ 24 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ ವೀಡಿಯೊ ಕರೆಯಲ್ಲಿ ಚಾಟ್ ಮಾಡುತ್ತಿದ್ದಾಗ ಯುವತಿಗೆ ಬೆತ್ತಲಾಗಲು ಹೇಳಿದ್ದು ಆಕೆ ಅವನು ಹೇಳಿದಂತೆ ಮಾಡಿದ್ದಾಳೆ. ಯುವಕ ಸ್ಕ್ರೀನ್ ರೆಕಾರ್ಡಿಂಗ್ ಮೂಲಕ ವೀಡಿಯೊವನ್ನು ಸೆರೆಹಿಡಿದುಕೊಂಡಿದ್ದಾನೆ. ಸೋಮವಾರ ಯುವತಿ ಯುವಕನೊಂದಿಗೆ ಮದುವೆಯ ಪ್ರಸ್ತಾಪ ತಿರಸ್ಕರಿಸಿ ಅವಳು ಸಂಬಂಧ ಹೊಂದಿದ್ದ ವ್ಯಕ್ತಿಯೊಂದಿಗೆ ಓಡಿಹೋಗಿ ಇಬ್ಬರೂ ಮಂಗಳವಾರ ಮದುವೆಯಾದರು.
ಆಕೆಯ ವಿಡಿಯೋ ಮಾಡಿಕೊಂಡಿದ್ದ ನಿಶ್ಚಿತಾರ್ಥವಾಗಿದ್ದ ಯುವಕನಿಗೆ ಮದುವೆ ಮಾಡಿಕೊಂಡಿರುವ ವಿಷಯ ಗೊತ್ತಾಗಿ ಅಶ್ಲೀಲ ವೀಡಿಯೊವನ್ನು ಆಕೆಯ ಪತಿಗೆ ಕಳುಹಿಸಿದ್ದಾನೆ. ಮದುವೆಯ ದಿನವೇ ಈ ವಿಡಿಯೋ ಜಗಳಕ್ಕೆ ಕಾರಣವಾಗಿದೆ. ಈ ವಿಚಾರ ತಿರುವು ಪಡೆದಿದ್ದು, ಮದುವೆಯ ರಾತ್ರಿ ತನ್ನ ಪತ್ನಿಯ ಆಕ್ಷೇಪಾರ್ಹ ವೀಡಿಯೊವನ್ನು ಸ್ವೀಕರಿಸಿದ ವ್ಯಕ್ತಿ, ಅದನ್ನು ತನ್ನ ತಾಯಿ ಮತ್ತು ಸಹೋದರನಿಗೆ ತೋರಿಸಿದ್ದಾನೆ. ಇಬ್ಬರೂ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲು ಸಲಹೆ ನೀಡಿದ್ದಾರೆ.
ಅವರು ಹೇಳಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದು, ಆತನ ಮತ್ತು ಆತನ ಸಂಬಂಧಿಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಮಹಿಳೆಯ ವಿಡಿಯೋವನ್ನು ಶೇರ್ ಮಾಡಿರುವ ಪುರುಷ, ಆತನ ಸಹೋದರ ಮತ್ತು ತಾಯಿ ಹಾಗೂ ನಿಶ್ಚಿತಾರ್ಥ ಮಾಡಿಕೊಂಡು ವಿಡಿಯೋ ಸೆರೆ ಹಿಡಿದ ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.