HomeKarnatakaಮತ ಚಲಾಯಿಸುವ ಮುನ್ನವೇ ಉಸಿರು ಚೆಲ್ಲಿದ ವೃದ್ಧೆ; ಮತದಾನ ಮಾಡಿಸಲು ಅಧಿಕಾರಿಗಳು ತೆರಳಿದ್ದಾಗಲೇ ಘಟನೆ

ಮತ ಚಲಾಯಿಸುವ ಮುನ್ನವೇ ಉಸಿರು ಚೆಲ್ಲಿದ ವೃದ್ಧೆ; ಮತದಾನ ಮಾಡಿಸಲು ಅಧಿಕಾರಿಗಳು ತೆರಳಿದ್ದಾಗಲೇ ಘಟನೆ

ಕೊಪ್ಪಳ: ಹಿರಿಯ ನಾಗರಿಕರಿಗೆ ಮತದಾನ ಮಾಡಿಸಲೆಂದು ಚುನಾವಣಾ ಅದಿಕಾರಿಗಳು ಮನೆಗೆ ತೆರಳಿದ್ದಾಗಲೇ ದುರಂತ ಸಂಭವಿಸಿದ್ದು, ಮತದಾನ ಮಾಡಲು ಮುಂದಾಗಿದ್ದ ವೃದ್ಧೆ ಸಾವನ್ನಪ್ಪಿದ ಘಟನೆ ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದಲ್ಲಿ ನಡೆದಿದೆ.

ವಯೋಸಹಜಕಾಯಿಲೆಯಿಂದ ಬಳಲುತ್ತಿದ್ದ 95 ವರ್ಷದ ಪಾರ್ವತಮ್ಮ ಸಜ್ಜನ ಮತದಾನ ಮಾಡುವುದಕ್ಕೂ ಮುನ್ನವೇ ಮೃತಪಟ್ಟಿದ್ದಾರೆ.

ಮನೆಯಿಂದಲೇ ಮತದಾನ ಮಾಡಲೆಂದು ಪಾರ್ವತಮ್ಮ ಸಜ್ಜನ ಹೆದ್ಸರು ನೊಂದಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಚುನಾವಣಾ ಅಧಿಕಾರಿಗಳು ಮತಪಡೆಯಲು ಪಾರ್ವತಮ್ಮ ಅವರ ಮನೆಗೆ ತೆರಳಿದ್ದರು. ಅಧಿಕಾರಿಗಳು ಆಗಮಿಸಿದ್ದ ವೇಳೆಯೇ ಪಾರ್ವತಮ್ಮ ಕೊನೆಯುಸಿರೆಳೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular