HomeAstroಮನೆಗೆ ಸಂಪತ್ತಿನ ದೇವತೆಯ ಆಗಮನದ ಸೂಚನೆ ಈ ಕನಸು; ಶೀಘ್ರದಲ್ಲೇ ಆಗುತ್ತಾರೆ ಕೋಟ್ಯಾಧಿಪತಿ.....!

ಮನೆಗೆ ಸಂಪತ್ತಿನ ದೇವತೆಯ ಆಗಮನದ ಸೂಚನೆ ಈ ಕನಸು; ಶೀಘ್ರದಲ್ಲೇ ಆಗುತ್ತಾರೆ ಕೋಟ್ಯಾಧಿಪತಿ…..!

ಕನಸಿನ ಶಾಸ್ತ್ರದಲ್ಲಿ ಅನೇಕ ಸಂಗತಿಗಳ ಬಗ್ಗೆ ಉಲ್ಲೇಖವಿದೆ. ಕೆಲವು ನಿರ್ದಿಷ್ಟ ವಸ್ತುಗಳು ಕನಸಿನಲ್ಲಿ ಕಂಡರೆ ಅದೃಷ್ಟದ ಸಂಕೇತ. ಕನಸಿನಲ್ಲಿ ಈ ವಸ್ತುಗಳಲ್ಲಿ ಒಂದನ್ನು ನೀವು ನೋಡಿದರೆ, ಲಕ್ಷ್ಮಿ ದೇವಿಯು ಮನೆಗೆ ಆಗಮಿಸುತ್ತಾಳೆ.

ಕನಸಿನ ವಿಜ್ಞಾನದ ಪ್ರಕಾರ ರಾತ್ರಿಯ ವಿವಿಧ ಸಮಯಗಳಲ್ಲಿ ಕಾಣುವ ಕನಸುಗಳು ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತವೆ. ಕನಸುಗಳು ಭವಿಷ್ಯದಲ್ಲಿ ಸಂಭವಿಸುವ ಧನಾತ್ಮಕ ಮತ್ತು ಋಣಾತ್ಮಕ ಘಟನೆಗಳ ಮುನ್ಸೂಚನೆ ನೀಡುತ್ತವೆ.

ಕನಸಿನಲ್ಲಿ ಲಕ್ಷ್ಮಿ ದೇವಿ ಕಂಡರೆ ಅದು ಮಂಗಳಕರ. ಇದು ಭವಿಷ್ಯದಲ್ಲಿ ಆರ್ಥಿಕ ಲಾಭವನ್ನು ಸೂಚಿಸುತ್ತದೆ. ಹಣೆಬರಹ ಶೀಘ್ರದಲ್ಲೇ ಬದಲಾಗಲಿದೆ ಎಂದರ್ಥ. ಇಂತಹ ಕನಸು ಬಿದ್ದರೆ ಮರುದಿನ ಲಕ್ಷ್ಮಿ ದೇವಿಯನ್ನು ಪೂಜಿಸಿ. ಇದರಿಂದ ತಾಯಿ ಸಂತುಷ್ಟಳಾಗಿ ಭಕ್ತರನ್ನು ಶ್ರೀಮಂತರನ್ನಾಗಿಸುತ್ತಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕನಸಿನಲ್ಲಿ ಲಕ್ಷ್ಮಿ ದೇವಿಯು ತನ್ನ ವಾಹನವಾದ ಗೂಬೆಯ ಮೇಲೆ ಸವಾರಿ ಮಾಡುತ್ತಿದ್ದರೆ ಅದು ಕೂಡ ಶುಭ ಫಲಿತಾಂಶಗಳನ್ನು ತರುತ್ತದೆ. ಈ ಕನಸು ಬಿದ್ದರೆ ನೀವು ಶೀಘ್ರದಲ್ಲೇ ಹಣವನ್ನು ಗಳಿಸಲಿದ್ದೀರಿ ಎಂದರ್ಥ. ಅಂತಹವರ ಮನೆಗೆ ಹಣವು ಹುಡುಕಿಕೊಂಡು ಬರುತ್ತದೆ. ಲಕ್ಷ್ಮಿದೇವಿಯ ಕೃಪೆಯಿಂದ ಅವರು ಶ್ರೀಮಂತರಾಗುತ್ತಾರೆ.

ಕನಸಿನಲ್ಲಿ ತಾಯಿ ಲಕ್ಷ್ಮಿಯೊಂದಿಗೆ ಗಣೇಶ ಕಾಣಿಸಿಕೊಂಡರೆ ಅದು ಕೂಡ ಮಂಗಳಕರ. ಈ ಕನಸು ನಮ್ಮ ಜೀವನದಲ್ಲಿರುವ ಎಲ್ಲಾ ದುಃಖ ಮತ್ತು ಅಡೆತಡೆಗಳ ಅಂತ್ಯವನ್ನು ಸೂಚಿಸುತ್ತದೆ. ಇದು ಸಂತೋಷದ ಆಗಮನದ ಸೂಚನೆಯೂ ಹೌದು.

ಕನಸಿನಲ್ಲಿ ಲಕ್ಷ್ಮಿ ನಾರಾಯಣನನ್ನು ನೋಡುವುದು ಶುಭ ಫಲಿತಾಂಶಗಳನ್ನು ನೀಡುತ್ತದೆ. ಅಂತಹವರ ಮನೆಗೆ ಲಕ್ಷ್ಮಿ ಆಗಮಿಸುತ್ತಾಳೆ, ಶ್ರೀಹರಿಯ ಆಶೀರ್ವಾದ ಸಹ ದೊರೆಯುತ್ತದೆ. ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular