ಬೆಂಗಳೂರು: ಸೈಬರ್ ಕ್ರೈಂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಾಟ್ಸಾಪ್ ಗೆ ಒಮ್ದು ಲಿಂಕ್ ಕಳುಹಿಸಿ ಆ ಲಿಂಕ್ ನನ್ನು ಕ್ಲಿಕ್ ಮಾಡುವಂತೆ ಹೇಳಿ ಷೇರು ಹೂಡಿಕೆ ಹೆಸರಲ್ಲಿ ಕೋಟಿ ಕೋಟಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಅಶೋಕ್ ತಿರುಮಲ ಎಂಬುವವರು ಬರೋಬ್ಬರಿ 5.17 ಕೋಟಿ ರೂಪಾಯಿ ಕಳೆದುಕೊಂಡಿದ್ದು, ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಶೋಕ್ ತಿರುಮಲ ವಾಟ್ಸಾಪ್ ಗೆ Www.byc-app.com ಎಂಬ ಲಿಂಕ್ ಕಳುಹಿಸಿದ ವಚಕರು ಅದನ್ನು ಕ್ಲಿಕ್ ಮಾಡಲು ಹೇಳಿದ್ದಾರೆ. ಬಳಿಕ ಷೇರು ಖರೀದಿಸಿ ಇದರಿಂದ ಅತ್ಯಧಿಕ ಲಾಭವಾಗುತ್ತದೆ ಎಂದು ನಂಬಿಸಿದ್ದಾರೆ. ವಂಚಕರ ಮಾತು ನಂಬಿದ ಅಶೋಕ್, ಲಿಂಕ್ ಓಪನ್ ಮಾಡಿ ಡೌನ್ ಮಾಡಿಕೊಂಡಿದ್ದಾರೆ.
ಈ ಲಿಂಕ್ ಮೂಲಕ ಅಶೋಕ್ ತಿರುಮಲ ಅವರ ಅಕೌಂಟ್ ನಿಂದ ಹಂತ ಹಂತವಾಗಿ ವಂಚಕರು ಹಣ ದೋಚಿದ್ದಾರೆ. ಬರೋಬ್ಬರಿ 5.18 ಕೋಟಿ ಭಾರಿ ಹಣ ಡ್ರಾ ಮಾಡಿಕೊಂಡಿದ್ದಾರೆ. ಹಣ ಕಳೆದುಕೊಂಡ ಅಶೋಕ್ ತಿರುಮಲ ಸೈಬರ್ ಕ್ರೈಂ ಗೆ ದೂರು ನೀಡಿದ್ದು, ಎಫ್ ಐ ಆರ್ ದಾಖಲಾಗಿದೆ.