HomeEntertainmentBREAKING : ಹಿರಿಯ ನಟ ದ್ವಾರಕೀಶ್ ನಿಧನದ ಹಿನ್ನೆಲೆ ನಾಳೆ ಕನ್ನಡ ಚಿತ್ರರಂಗ ಬಂದ್..!

BREAKING : ಹಿರಿಯ ನಟ ದ್ವಾರಕೀಶ್ ನಿಧನದ ಹಿನ್ನೆಲೆ ನಾಳೆ ಕನ್ನಡ ಚಿತ್ರರಂಗ ಬಂದ್..!

ಬೆಂಗಳೂರು : ಹಿರಿಯ ನಟ ದ್ವಾರಕೀಶ್ ನಿಧನದ ಹಿನ್ನೆಲೆ ನಾಳೆ ಕನ್ನಡ ಚಿತ್ರರಂಗ ಬಂದ್ ಮಾಡಲು ಫಿಲ್ಮ್ ಚೇಂಬರ್ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್ ಅಗಲಿದ ಹಿರಿಯ ನಟ ದ್ವಾರಕೀಶ್ ಅವರಿಗೆ ಗೌರವ ಸಲ್ಲಿಸಲು ನಾಳೆ ಕನ್ನಡ ಚಿತ್ರರಂಗ ಬಂದ್ ಮಾಡಲು ನಿರ್ಧರಿಸಲಾಗಿದೆ. ಎಲ್ಲರೂ ಇದಕ್ಕೆ ಬೆಂಬಲ ನೀಡುವಂತೆ ಎನ್ ಎಂ ಸುರೇಶ್ ಮನವಿ ಮಾಡಿದ್ದಾರೆ.

ನಾಳೆ ಒಂದು ದಿನ ಸಿನಿಮಾ ಚಟುವಟಿಕೆ ಬೇಡ, ಸ್ವಯಂ ಪ್ರೇರಿತವಾಗಿ ಬಂದ್ ಮಾಡಲು ಮನವಿ ಮಾಡುತ್ತೇನೆ. ಅವರನ್ನು ಗೌರವ ಪೂರ್ವಕವಾಗಿ ಕಳುಹಿಸಿಕೊಡೋಣ. ದ್ವಾರಕೀಶ್ ಅಂತ್ಯಕ್ರಿಯೆ ಬಗ್ಗೆ ಸರ್ಕಾರದ ಬಳಿ ಮಾತನಾಡುತ್ತೇನೆ ಎಂದು ಎನ್ ಎಂ  ಸುರೇಶ್  ಅವರು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಟ ದ್ವಾರಕೀಶ್ ಅವರ ಅಂತ್ಯಕ್ರಿಯೆ ನಾಳೆ ನಡೆಯಲಿದೆ. ನಾಳೆ ಬುಧವಾರ ಬೆಳಿಗ್ಗೆ 11:30ಕ್ಕೆ ಬೆಂಗಳೂರಿನ ಚಾಮರಾಜಪೇಟೆಯ ಟಿಆರ್ ಮೀಲ್ ನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.ದ್ವಾರಕೀಶ್ ಅವರ ಅಂತಿಮ ದರ್ಶನಕ್ಕಾಗಿ ಅವರ ಪಾರ್ಥಿವ ಶರೀರವನ್ನು ಅವರ ನಿವಾಸದಲ್ಲಿಯೇ ನಾಳೆ ಬೆಳಿಗ್ಗೆವರೆಗೂ ಇಡಲಾಗುವುದು. ಗಣ್ಯರು ಹಾಗೂ ಕುಟುಂಬ ವರ್ಗದವರು ಅವರ ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular