ಹ್ಯುಂಡೈ ಮೋಟಾರ್ ಇಂಡಿಯಾದ ಕ್ರೆಟಾ ಎಸ್‌ಯುವಿ ಬಿಡುಗಡೆಯಾದ ಕೇವಲ 3 ತಿಂಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆದುಕೊಂಡಿದೆ. ಕೊರಿಯನ್ ಕಾರು ಕಂಪನಿ ಹ್ಯುಂಡೈ, ಜನವರಿ 16 ರಂದು ಹೊಸ ಕ್ರೆಟಾವನ್ನು ಬಿಡುಗಡೆ ಮಾಡಿತ್ತು. ಇದರ ಆರಂಭಿಕ ಬೆಲೆ 10.99 ರೂಪಾಯಿ. ಟಾಪ್ ಮಾಡೆಲ್ 20.15 ಲಕ್ಷ ರೂಪಾಯಿ ಬೆಲೆಬಾಳುತ್ತದೆ. ಅದರ ಕೆಲವು ರೂಪಾಂತರಗಳ ಬೆಲೆಯನ್ನು ಇತ್ತೀಚೆಗೆ ಹೆಚ್ಚಿಸಲಾಗಿದೆ. ಪೆಟ್ರೋಲ್ ವೇರಿಯಂಟ್‌ಗಳ ಬೆಲೆ 3,500 ರೂ.ಗಳಷ್ಟು ಏರಿಕೆಯಾಗಿದ್ದು, ಡೀಸೆಲ್ ರೂಪಾಂತರಗಳ ಬೆಲೆ 10,500 ರೂಪಾಯಿ ಹೆಚ್ಚಳವಾಗಿದೆ.
ಕ್ರೆಟಾ ಭಾರತದಲ್ಲಿ ಅತ್ಯುತ್ತಮ ಮಾರಾಟ ಕಂಡಿರುವ ಹ್ಯುಂಡೈನ ಕಾರು. ಕಳೆದ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಗ್ರಾಹಕರು ಇದನ್ನು ಖರೀದಿಸಲು ಮುಗಿಬಿದ್ದಿದ್ದಾರೆ. ಫೆಬ್ರವರಿಯಲ್ಲಿ 15,276 ಯುನಿಟ್‌ಗಳು ಮಾರಾಟವಾಗಿದ್ದರೆ, ಮಾರ್ಚ್‌ನಲ್ಲಿ 16,458 ಯುನಿಟ್‌ಗಳು ಮಾರಾಟವಾಗಿವೆ. 2024ರ ಮಾರ್ಚ್ ತಿಂಗಳಿನಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾದ ಕಾರು ಎನಿಸಿಕೊಂಡಿದೆ. ವಿಶೇಷ ಅಂದ್ರೆ ಸನ್‌ರೂಫ್ ಇರುವ ರೂಪಾಂತರಗಳು ಹೆಚ್ಚು ಬಿಕರಿಯಾಗುತ್ತಿವೆ. ಒಟ್ಟಾರೆ ಬುಕ್ಕಿಂಗ್ ಪೈಕಿ ಶೇ.71ರಷ್ಟು ಗ್ರಾಹಕರು ಸನ್‌ರೂಫ್ ಹೊಂದಿರುವ ಮಾದರಿಯನ್ನೇ ಖರೀದಿಸಿದ್ದಾರೆ.
ಹ್ಯುಂಡೈನ ಹೊಸ ಕ್ರೆಟಾ, ‘ಸೆನ್ಸುಯಸ್ ಸ್ಪೋರ್ಟಿನೆಸ್’ ಅನ್ನು ಆಧರಿಸಿದೆ. ಹೊಸ ಹುಂಡೈ ಕ್ರೆಟಾದ ಲುಕ್ ಕೂಡ ಅದ್ಭುತವಾಗಿದೆ. ಇದು ಲೆವೆಲ್ 2 ADAS ಸುರಕ್ಷತಾ ವ್ಯವಸ್ಥೆ ಸೇರಿದಂತೆ ಹಲವು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಹೊಸ 1.5 ಲೀಟರ್ ಟರ್ಬೊ ಜಿಡಿಐ ಎಂಜಿನ್ ಅನ್ನು ಸಹ ಇದರಲ್ಲಿ ನೀಡಲಾಗಿದೆ. ಇದಲ್ಲದೇ ಡೀಸೆಲ್ ಸೇರಿದಂತೆ ಇನ್ನೆರಡು ಎಂಜಿನ್ ಆಯ್ಕೆಗಳಿವೆ. ಮಾರುಕಟ್ಟೆಯಲ್ಲಿ ಇದು ಕಿಯಾ ಸೆಲ್ಟೋಸ್, ಟಾಟಾ ಹ್ಯಾರಿಯರ್, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮತ್ತು ಟೊಯೋಟಾ ಹೈರೈಡರ್‌ಗಳೊಂದಿಗೆ ಸ್ಪರ್ಧಿಸುತ್ತದೆ.