alex Certify ಮಾರ್ಚ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್‌ 25 ಕಾರುಗಳಿವು; ಅಗ್ರಸ್ಥಾನದಲ್ಲಿ ಯಾವುದಿದೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರ್ಚ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್‌ 25 ಕಾರುಗಳಿವು; ಅಗ್ರಸ್ಥಾನದಲ್ಲಿ ಯಾವುದಿದೆ ಗೊತ್ತಾ….?

2024ರ ಮಾರ್ಚ್ ತಿಂಗಳಿನಲ್ಲಿ ಕಾರುಗಳ ಮಾರಾಟದ ಭರಾಟೆ ಜೋರಾಗಿಯೇ ಇತ್ತು. ಅತಿ ಹೆಚ್ಚು ಮಾರಾಟವಾದ 25 ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿಯ 10 ಕಾರುಗಳಿವೆ. ಟಾಟಾ ಮೋಟಾರ್ಸ್‌ನ 4 ಕಾರುಗಳು ಮತ್ತು ಮಹೀಂದ್ರಾದ 4 ಕಾರುಗಳು ಸೇರಿವೆ. ಇದಲ್ಲದೆ ಹುಂಡೈನ 3 ಕಾರುಗಳು, ಕಿಯಾ ಕಂಪನಿಯ 2 ಮತ್ತು ಟೊಯೋಟಾದ 2 ಕಾರುಗಳು ಈ ಲಿಸ್ಟ್‌ನಲ್ಲಿವೆ. ಗಮನಿಸಬೇಕಾದ ಅಂಶವೆಂದರೆ ಬಹಳ ಸಮಯದ ನಂತರ ಈ ಬಾರಿ ಟಾಪ್‌ 2 ಸ್ಥಾನಗಳಲ್ಲಿ ಮಾರುತಿ ಸುಜುಕಿಯ ಕಾರುಗಳು ಕಾಣಿಸಿಕೊಂಡಿಲ್ಲ.

ಮಾರ್ಚ್ 2024 ರಲ್ಲಿ 17,547 ಯುನಿಟ್‌ಗಳನ್ನು ಮಾರಾಟ ಮಾಡಿರುವ ಟಾಟಾ ಪಂಚ್, ಟಾಪ್‌ 25 ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಹುಂಡೈ ಕ್ರೆಟಾ ಎರಡನೇ ಸ್ಥಾನದಲ್ಲಿದೆ. 16,458 ಕ್ರೆಟಾ ಕಾರುಗಳು ಮಾರಾಟವಾಗಿವೆ. ಕ್ರೆಟಾ ನಂತರ ವ್ಯಾಗನಾರ್‌, ಡಿಸಾಯರ್‌, ಸ್ವಿಫ್ಟ್ ಮತ್ತು ಬಲೆನೊದಂತಹ ನಾಲ್ಕು ಮಾರುತಿ ಕಾರುಗಳಿವೆ. 7 ನೇ ಸ್ಥಾನದಲ್ಲಿ ಮಹೀಂದ್ರ ಸ್ಕಾರ್ಪಿಯೊದ ಎನ್ ಮತ್ತು ಕ್ಲಾಸಿಕ್ ಇವೆ.

ಮಾರ್ಚ್‌ನಲ್ಲಿ ಮಾರಾಟವಾದ ಟಾಪ್-25 ಕಾರುಗಳು…

1- ಟಾಟಾ ಪಂಚ್‌ – 17,547 ಯುನಿಟ್‌

2- ಹ್ಯುಂಡೈ ಕ್ರೆಟಾ – 16,458 ಯುನಿಟ್‌

3- ಮಾರುತಿ ವ್ಯಾಗನಾರ್‌ – 16,368 ಯೂನಿಟ್

4- ಮಾರುತಿ ಡಿಸಾಯರ್‌- 15,894 ಯುನಿಟ್‌

5- ಮಾರುತಿ ಸ್ವಿಫ್ಟ್‌ – 15,728 ಯುನಿಟ್‌

6- ಮಾರುತಿ ಬಲೆನೊ- 15,588 ಯುನಿಟ್‌

7- ಮಹೀಂದ್ರ ಸ್ಕಾರ್ಪಿಯೊ N + ಕ್ಲಾಸಿಕ್ – 15,151 ಯುನಿಟ್‌

8- ಮಾರುತಿ ಎರ್ಟಿಗಾ- 14,888 ಯುನಿಟ್‌

9- ಮಾರುತಿ ಬ್ರೆಝಾ – 14,614 ಯುನಿಟ್‌

10- ಟಾಟಾ ನೆಕ್ಸಾನ್‌ನ – 14,058 ಯುನಿಟ್‌

11- ಮಾರುತಿ ಫ್ರಾಂಕ್ಸ್‌- 12,531 ಯುನಿಟ್‌

12- ಮಾರುತಿ ಇಕೋ- 12,019 ಯುನಿಟ್‌

13- ಮಾರುತಿ ಗ್ರಾಂಡ್ ವಿಟಾರಾ – 11,232 ಯೂನಿಟ್

14 – ಮಹೀಂದ್ರ ಬೊಲೆರೊ – 10,347 ಯುನಿಟ್

15 – ಟೊಯೊಟಾ ಇನ್ನೋವಾ ಕ್ರಿಸ್ಟಾ + ಹೈಕ್ರಾಸ್ – 9900 ಯುನಿಟ್ 16- ಹುಂಡೈ ವೆನ್ಯೂ – 9614 ಯುನಿಟ್‌

17 – ಮಾರುತಿ ಆಲ್ಟೊ-  9332 ಯುನಿಟ್‌

18- ಕಿಯಾ ಸೋನೆಟ್‌ – 8750 ಯುನಿಟ್‌

19 – ಹುಂಡೈ ಎಕ್ಸ್‌ಟರ್‌ – 8475 ಯುನಿಟ್‌

20- ಕಿಯಾ ಸೆಲ್ಟೋಸ್‌ನ – 7912 ಯುನಿಟ್‌

21- ಮಹೀಂದ್ರ XUV700 – 6611 ಯುನಿಟ್‌

22- ಟಾಟಾ ಟಿಯಾಗೊ – 6381 ಯುನಿಟ್‌

23 – ಮಹೀಂದ್ರ ಥಾರ್‌ – 6049 ಯುನಿಟ್‌

24- ಟಾಟಾ ಆಲ್ಟ್ರೋಜ್‌ – 5985 ಯುನಿಟ್‌

25 – ಟೊಯೊಟಾ ಹೈರೈಡರ್‌ – 5965 ಯುನಿಟ್‌

ಮಾರ್ಚ್‌ ತಿಂಗಳಲ್ಲಿ ಗ್ರಾಹಕರು ಟಾಟಾ ಪಂಚ್‌ ಖರೀದಿಗೆ ಹೆಚ್ಚು ಆಸಕ್ತಿ ತೋರಿದ್ದಾರೆ. ಹಾಗಾಗಿ ಈ ಕಾರು ಪಟ್ಟಿಯ ಅಗ್ರಸ್ಥಾನದಲ್ಲಿದೆ. ಟಾಟಾ ಪಂಚ್ ಪ್ರಸ್ತುತ,  ಪೆಟ್ರೋಲ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿದೆ. ಇತ್ತೀಚೆಗಷ್ಟೇ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ. ಈ ಮೈಕ್ರೋ ಎಸ್‌ಯುವಿಯ ಆರಂಭಿಕ ಬೆಲೆ 10.99 ಲಕ್ಷ ರೂಪಾಯಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...