ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2024 ರ ಪಂದ್ಯ 20ರಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್(ಎಂಐ) ದೆಹಲಿ ಕ್ಯಾಪಿಟಲ್ಸ್(ಡಿಸಿ) ಮುಖಾಮುಖಿಯಾಗಿದ್ದವು.
ಪಂದ್ಯದಲ್ಲಿ DC 235 ರನ್‌ಗಳಿಂದ ಜಯಗಳಿಸಿದೆ ಎಂದು ತೋರಿಸಿ ವಾಂಖೆಡೆ ಕ್ರೀಡಾಂಗಣವು ದೊಡ್ಡ ಪ್ರಮಾದ ಮಾಡಿದೆ.
ಪ್ರವಾಸಿ ನಾಯಕ ಟಾಸ್ ಗೆದ್ದು ಆತಿಥೇಯರನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ರೋಹಿತ್ ಶರ್ಮಾ(49), ಇಶಾನ್ ಕಿಶನ್(42), ಟಿಮ್ ಡೇವಿಡ್(45*) ಮತ್ತು ರೊಮಾರಿಯೊ ಶೆಫರ್ಡ್ ಅವರ ಅಜೇಯ 39 ರನ್‌ಗಳ ನೆರವಿನಿಂದ ಎಂಐ ತನ್ನ ನಿಗದಿತ 20 ಓವರ್‌ಗಳಲ್ಲಿ 234 ರನ್ ಗಳಿಸಿತು. 235 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ಡೆಲ್ಲಿ ತಂಡ ಆಟ ಆರಂಭಿಸುವ ಮೊದಲು ವಾಂಖೆಡೆ ಸ್ಟೇಡಿಯಂ ಅಧಿಕಾರಿಗಳು ತಪ್ಪು ಮಾಡಿದ ಕಾರಣಕ್ಕೆ ಸುದ್ದಿಯಾಗಿದೆ.
‘ಡಿಸಿ 235 ರನ್‌ಗಳಿಂದ ಗೆದ್ದಿದೆ’ ಎಂದು ದೊಡ್ಡ ಪರದೆಯಲ್ಲಿ ತೋರಿಸಿದ್ದರಿಂದ ಕ್ರೀಡಾಂಗಣದ ಅಧಿಕಾರಿಗಳು ದೊಡ್ಡ ಪ್ರಮಾದ ಎಸಗಿದ್ದಾರೆ. ಅದರ ಚಿತ್ರವು ಎಕ್ಸ್ ನಲ್ಲಿ(ಹಿಂದಿನ ಟ್ವಿಟರ್) ವೈರಲ್ ಆಗುತ್ತಿದೆ.
ವಾಂಖೆಡೆ ಸ್ಟೇಡಿಯಂ ಪ್ರಮಾದ
ರಿಷಬ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್(DC) ಅವರು ತಮ್ಮ ಗುರಿ ಬೆನ್ನಟ್ಟುವ ಮೊದಲು ಈ ಪ್ರಮಾದ ನಡೆದಿದ್ದು, ಅಧಿಕಾರಿಗಳು ಈ ತಪ್ಪನ್ನು ಕೂಡಲೇ ಸರಿಪಡಿಸಿದರು, ‘ಡೆಲ್ಲಿ ತಂಡಕ್ಕೆ ಗೆಲ್ಲಲು 235 ರನ್‌ಗಳು ಬೇಕು’ ಎಂದು ತೋರಿಸಿದರು. ಡೆಲ್ಲಿ ತಂಡ ಈ ಕುರಿತು ಪೋಸ್ಟ್ ಹಂಚಿಕೊಂಡಿದೆ. ಡೆಲ್ಲಿ ತಂಡಕ್ಕೆ ಗೆಲ್ಲಲು 235 ರನ್‌ಗಳು ಬೇಕಿದ್ದು, ಇದು ಬ್ಯಾಟ್ ನಿಂದ ಉತ್ತರಿಸುವ ಸಮಯ ಎಂದಿದೆ.