26 ವರ್ಷದ ಹಾಲಿ ಬ್ರಾಮ್ಲಿಯನ್ನು ಆಕೆಯ ಪತಿ ಭೀಕರವಾಗಿ ಹತ್ಯೆಗೈದಿರುವುದು ಯುನೈಟೆಡ್ ಕಿಂಗ್‌ಡಂ ಅನ್ನು ಬೆಚ್ಚಿಬೀಳಿಸಿದೆ. ಆರೋಪಿಯು ಆಕೆಯನ್ನು ಚಾಕುವಿನಿಂದ ಇರಿದು ಕೊಂದು ಆಕೆಯ ದೇಹವನ್ನು 200 ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ ತನ್ನ ಅಡುಗೆಮನೆಯ ಲ್ಯಾಡರ್‌ನಲ್ಲಿ ಶೇಖರಿಸಿಟ್ಟು, ನಂತರ ಆಕೆಯ ಶವವನ್ನು ಸ್ನೇಹಿತನ ಸಹಾಯದಿಂದ ಎಸೆದಿದ್ದನು.
ಆರೋಪಿ 28 ವರ್ಷದ ನಿಕೋಲಸ್ ಮೆಟ್ಸನ್ ಶುಕ್ರವಾರ ತನ್ನ ಪತ್ನಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಮಾರ್ಚ್‌ನಲ್ಲಿ ನಡೆದ ಕೊಲೆಯ ಆರೋಪಗಳನ್ನು ಅವನು ನಿರಾಕರಿಸುತ್ತಿದ್ದ. ಅಧಿಕಾರಿಗಳು ಲಿಂಕನ್ ಕ್ರೌನ್ ಕೋರ್ಟ್‌ಗೆ ಕೊಲೆಯ ಹಿಂದಿನ ಕಾರಣ ಅಥವಾ ಅದನ್ನು ಹೇಗೆ ಮಾಡಿದರು ಎಂಬುದನ್ನು ಬಹಿರಂಗಪಡಿಸಲಿಲ್ಲ.
ಬ್ರ್ಯಾಮ್ಲಿಯ ಮೃತದೇಹವನ್ನು ವಿಲೇವಾರಿ ಮಾಡಲು ಮೆಟ್ಸನ್ ತನ್ನ ಸ್ನೇಹಿತ ಜೋಶುವಾ ಹ್ಯಾನ್ ಕಾಕ್ ಗೆ ಐವತ್ತು ಪೌಂಡ್ ಗಳನ್ನು ಪಾವತಿಸಿದ್ದ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ಲಿಂಕನ್ ಶೈರ್ ಪೊಲೀಸರು ಮಾರ್ಚ್ 24, 2023 ರಂದು ದಂಪತಿಗಳ ಮನೆಗೆ ಭೇಟಿ ನೀಡಿದಾಗ, ಫ್ಲಾಟ್‌ನಲ್ಲಿ ಅಮೋನಿಯಾ ಮತ್ತು ಬ್ಲೀಚ್‌ನ ವಾಸನೆ ಇರುವುದು ಕಂಡುಬಂದಿದೆ. ಅಲ್ಲದೇ, ಸ್ನಾನದ ತೊಟ್ಟಿಯಲ್ಲಿ ರಕ್ತದಿಂದ ನೆನೆಸಿದ ಹಾಳೆಗಳು ಮತ್ತು ನೆಲದ ಮೇಲೆ ಕಪ್ಪು ಕಲೆಗಳು ಕಂಡು ಬಂದಿವೆ. ನಂತರ ಅದು ಬ್ರಾಮ್ಲಿಯ ರಕ್ತ ಎನ್ನುವುದು ಗೊತ್ತಾಗಿದೆ. ಮನೆಯನ್ನು ಹೊಸದಾಗಿ ನವೀಕರಿಸಿ ಸ್ವಚ್ಛಗೊಳಿಸಿದಂತೆ ಕಾಣುತ್ತಿತ್ತು. ಪೊಲೀಸರೊಂದಿಗೆ ಮಾತನಾಡುತ್ತಾ, ಮೆಟ್ಸನ್ ತನ್ನ ಹೆಂಡತಿಯ ಕೈಯಲ್ಲಿ ಕೌಟುಂಬಿಕ ದೌರ್ಜನ್ಯಕ್ಕೆ ಬಲಿಯಾಗಿರುವುದಾಗಿ ಹೇಳಿಕೊಂಡಿದ್ದಾನೆ. ಅವನು ತನ್ನ ತೋಳಿನ ಮೇಲೆ ಕಚ್ಚಿದ ಗಾಯ ಸಹ ತೋರಿಸಿದ್ದಾನೆ. ಮಾರ್ಚ್ 19 ರಂದು ಬ್ರಾಮ್ಲಿ ಮಹಿಳಾ ಗುಂಪಿನೊಂದಿಗೆ ಹೊರಟು ಹೋಗಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಪೊಲೀಸರು ಮೆಟ್ಸನ್ ಹೇಳಿಕೆಗಳಲ್ಲಿ ಸುಳ್ಳನ್ನು ಕಂಡುಕೊಂಡರು ಮತ್ತು ಅಂತಿಮವಾಗಿ ಫ್ಲಾಟ್ ನಲ್ಲಿ ಮತ್ತೆ ಪರಿಶೀಲನೆ ನಡೆಸಿದ್ದಾರೆ. ಬ್ರಾಮ್ಲಿ-ಮೆಟ್ಸನ್ ಅವರ ಫ್ಲಾಟ್‌ನಲ್ಲಿ ಹುಡುಕಾಟದ ಒಂದು ದಿನದ ನಂತರ, ಬಾಸಿಂಗ್‌ಹ್ಯಾಮ್‌ನ ವಿಥಮ್ ನದಿಯಲ್ಲಿ ಪ್ಲಾಸ್ಟಿಕ್ ಚೀಲ ಕಂಡು ಬಂದಿದೆ. ನದಿಯ ಮೂಲಕ ಹಾದುಹೋಗುವ ವಾಕರ್, ನದಿಯಲ್ಲಿ ತೇಲುವ ಪ್ಲಾಸ್ಟಿಕ್ ಚೀಲಗಳನ್ನು ಗಮನಿಸಿದ್ದು, ಅವುಗಳಲ್ಲಿ ಒಂದರಲ್ಲಿ ಮಾನವ ಕೈ ಇತ್ತು ಎಂದು ಪೊಲೀಸರಿಗೆ ಮಾಹಿತಿ ನೀಡಿದ ಕೂಡಲೇ ಡೈವರ್‌ಗಳು ನದಿಗೆ ಹಾರಿದರು, ಬ್ರಾಮ್ಲಿಯ ದೇಹದ 224 ತುಣುಕುಗಳು ಮಾತ್ರ ಕಂಡುಬಂದಿವೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.