alex Certify ಆಯುಷ್ಮಾನ್ ಕಾರ್ಡ್ ದಾರರ ಗಮನಕ್ಕೆ : ಈ ಆಸ್ಪತ್ರೆಗಳಲ್ಲಿ ಸಿಗಲಿದೆ 5 ಲಕ್ಷರೂವರೆಗೆ ಉಚಿತ ಚಿಕಿತ್ಸೆ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಯುಷ್ಮಾನ್ ಕಾರ್ಡ್ ದಾರರ ಗಮನಕ್ಕೆ : ಈ ಆಸ್ಪತ್ರೆಗಳಲ್ಲಿ ಸಿಗಲಿದೆ 5 ಲಕ್ಷರೂವರೆಗೆ ಉಚಿತ ಚಿಕಿತ್ಸೆ.!

ಬೆಂಗಳೂರು : ಸರ್ಕಾರವು ಬಡ ಜನತೆಗೆ ಸಿಹಿಸುದ್ದಿ ನೀಡಿದ್ದು, ಆಯುಷ್ಮಾನ್ ಭಾರತ್ – ಪ್ರಧಾನ ಮಂತ್ರಿ ಜನಾರೋಗ್ಯ- ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಕಾರ್ಡ್ ಯೋಜನೆಯಡಿ 5 ಲಕ್ಷ ರೂ.ವರೆಗೆ ಚಿಕಿತ್ಸೆ ಸೌಲಭ್ಯ ಪಡೆಯಬಹುದು.

ಆಯುಷ್ಮಾನ್ ಯೋಜನಾ ಸೌಲಭ್ಯಗಳು 

ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬಗಳಿಗೆ ವಾರ್ಷಿಕ 5 ಲಕ್ಷದವರೆಗೂ ಉಚಿತ ಮತ್ತು ಎಪಿಎಲ್ ಕುಟುಂಬಕ್ಕೆ 1.5 ಲಕ್ಷದವರೆಗೂ ಸಹಪಾವತಿ ಆಧಾರದ ಮೇಲೆ ಒಟ್ಟು 1650 ವಿವಿಧ ಬಗೆಯ ಚಿಕಿತ್ಸೆಗಳಿಗೆ ಎಲ್ಲಾ ಸರ್ಕಾರಿ ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯತುರ್ತು ಸಂದರ್ಭಗಳಲ್ಲಿ 171 ಚಿಕಿತ್ಸಾ ವಿಧಾನಗಳಿಗೆ ರೋಗಿಯು ನೇರವಾಗಿ ಚಿಕಿತ್ಸೆ ಪಡೆಯಬಹುದು.

ಯಾವ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸಿಗುತ್ತದೆ ಎಂಬುದನ್ನು ನೀವು ಈ ರೀತಿ ಚೆಕ್ ಮಾಡಬಹುದು
ಆಯುಷ್ಮಾನ್ ಕಾರ್ಡ್ ಆಸ್ಪತ್ರೆ ಪಟ್ಟಿಯನ್ನು ಆನ್ಲೈನ್ನಲ್ಲಿ ಪರಿಶೀಲಿಸಲು, ಈ ಸರಳ ಹಂತಗಳನ್ನು ಅನುಸರಿಸಿ:

ಹಂತ 1: ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: ಅಧಿಕೃತ ಪಿಎಂಜೆಎವೈ ವೆಬ್ಸೈಟ್ (hospitals.pmjay.gov.in) ಗೆ ಹೋಗಿ.

ಹಂತ 2: ಆಸ್ಪತ್ರೆ ಪಟ್ಟಿ ವಿಭಾಗ: ಮುಖಪುಟದಲ್ಲಿನ ಮೆನು ಬಾರ್ನಲ್ಲಿ ‘ಆಸ್ಪತ್ರೆ ಹುಡುಕಿ’ ಕ್ಲಿಕ್ ಮಾಡಿ
ಹಂತ 3: ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ: ನೀವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯನ್ನು ಕಾಣಬಹುದು. ನೀವು ಎಂಪಾನೆಲ್ ಮಾಡಿದ ಆಸ್ಪತ್ರೆಗಳನ್ನು ಹುಡುಕಲು ಬಯಸುವ ರಾಜ್ಯ ಮತ್ತು ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ.
ಹಂತ 4: ಆಸ್ಪತ್ರೆ ಪ್ರಕಾರವನ್ನು ಆಯ್ಕೆ ಮಾಡಿ: ಆಸ್ಪತ್ರೆಗಳನ್ನು ಸಾರ್ವಜನಿಕ ಮತ್ತು ಖಾಸಗಿ ಎಂದು ವರ್ಗೀಕರಿಸಲಾಗಿದೆ. ನಿಮ್ಮ ಆದ್ಯತೆಗೆ ಸೂಕ್ತವಾದ ವರ್ಗವನ್ನು ಆಯ್ಕೆ ಮಾಡಿ.
ಹಂತ 5: ಆಸ್ಪತ್ರೆಯನ್ನು ಹುಡುಕಿ: ನೀವು ಈಗ ಜಿಲ್ಲೆ, ವಿಶೇಷತೆ ಮತ್ತು ಹೆಸರಿನ ಆಧಾರದ ಮೇಲೆ ಆಸ್ಪತ್ರೆಗಳನ್ನು ಹುಡುಕಬಹುದು. ನಿಮ್ಮ ಆದ್ಯತೆಗಳಿಗೆ ಹೊಂದಿಕೆಯಾಗುವ ಎಂಪಾನೆಲ್ ಮಾಡಿದ ಆಸ್ಪತ್ರೆಗಳ ಪಟ್ಟಿಯನ್ನು ಪಡೆಯಲು ನಿಮ್ಮ ಮಾನದಂಡವನ್ನು ನಮೂದಿಸಿ.
ಹಂತ 6: ಆಸ್ಪತ್ರೆಯನ್ನು ಸಂಪರ್ಕಿಸಿ: ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಆಸ್ಪತ್ರೆಯನ್ನು ನೀವು ಕಂಡುಕೊಂಡ ನಂತರ, ಅವರನ್ನು ನೇರವಾಗಿ ಸಂಪರ್ಕಿಸಲು ಸಲಹೆ ನೀಡಲಾಗುತ್ತದೆ

ಆಯುಷ್ಮಾನ್ ಕಾರ್ಡ್ ಸೌಲಭ್ಯಗಳು

ಫಲಾನುಭವಿಗಳಿಗೆ ಉಚಿತವಾಗಿ ಪಿವಿಸಿ ಮಾದರಿಯ ಹೆಲ್ತ್ ಕಾರ್ಡ್ ವಿತರಣೆ
ದೇಶಾದ್ಯಂತ ಶೀಘ್ರ ಚಿಕಿತ್ಸಾ ಸೇವೆ ಪಡೆಯಲು ಅವಕಾಶ
ಹೆಚ್ಚಿನ ಚಿಕಿತ್ಸೆಗಾಗಿ ಮೇಲ್ದರ್ಜೆ ಆಸ್ಪತ್ರೆಗೆ ಆನ್ ಲೈನ್ ಮೂಲಕ ರೆಫರಲ್ ಮಾಡಲು ಅನುಕೂಲ
ಚಿಕಿತ್ಸಾ ಆರೋಗ್ಯ ದತ್ತಾಂಶ ಸಂಗ್ರಹಿಸಿ ನಂತರದ ಚಿಕಿತ್ಸೆ ಸಂದರ್ಭದಲ್ಲಿ ಹಿಂದಿನ ಚಿಕಿತ್ಸಾ ದತ್ತಾಂಶದ ಮೇಲೆ ಶೀಘ್ರ ಚಿಕಿತ್ಸೆಗೆ ಅನುಕೂಲ.
ಆಯುಷ್ಮಾನ್ ಕಾರ್ಡ್ ನೋಂದಣಿ :
ಹತ್ತಿರದ ಗ್ರಾಮ ಒನ್/ ಕರ್ನಾಟಕ ಒನ್/ಬೆಂಗಳೂರು ಒನ್ CSC ಕೇಂದ್ರಕ್ಕೆ ಭೇಟಿ ನೀಡಿ ಸೂಕ್ತ ದಾಖಲೆ ನೀಡಿ ಕಾರ್ಡ್ ಮಾಡಿಸಿಕೊಳ್ಳಬಹುದು.

ನೋಂದಣಿ ಮಾಡಿಕೊಳ್ಳುವ ವಿಧಾನ

ಮ್ಮ ಮೊಬೈಲ್ನ ಗೂಗಲ್ ವೆಬ್ಸೈಟ್ನಲ್ಲಿ http://beneficiary.nha.gov.in ಎಂದು ಟೈಪ್ ಮಾಡಿದ ನಂತರ ಪಿ.ಎಮ್.ಜೆ.ವೈ ಬೆನಿಫಿಸಿರಿ ಪೋರ್ಟಲ್ ಕಂಡು ಬರುತ್ತದೆ. ಪೋರ್ಟಲ್ ಅನ್ನು ತೆರೆದಾಗ ಲಾಗಿನ್ ಆಸ್ ಎಂದು ಮಾಹಿತಿ ಕೇಳುವ ಹಂತದಲ್ಲಿ ಬೆನ್ಫಿಸಿರಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರದಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಒಟಿಪಿ ಮುಖಾಂತರ ಲಾಗಿನ್ ಮಾಡಿಕೊಳ್ಳಬೇಕು. ಒಟಿಪಿ ನೊಂದಾಯಿಸಿ ಸಬ್ಮಿಟ್ ಮಾಡಿದ ನಂತರ ಪಿ.ಎಮ್.ಜೆ.ವೈ ಪೊರ್ಟಲ್ ಒಪನ್ ಆಗುತ್ತದೆÀ. ಇಲ್ಲಿ ಸಾರ್ವಜನಿಕರು ತಮ್ಮ ರಾಜ್ಯ ಎಂಬಲ್ಲಿ ಕರ್ನಾಟಕ, ಜಿಲ್ಲೆ ಎನ್ನುವಲ್ಲಿ ನಿಮ್ಮ ಜಿಲ್ಲೆಯ ಯಾವುದು ಎಂದು ಅಥವಾ ತಮ್ಮ ಮೂಲ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಕ್ಲೈಮ್ಟೈಪ್ ಎನ್ನುವಲ್ಲಿ ಕುಟುಂಬ ಎಂದು ಆಯ್ಕೆ ಮಾಡಿಕೊಂಡು ಆಧಾರ್ ಸಂಖ್ಯೆ ನಮೂದಿಸಿ ಸರ್ಚ್ ಮಾಡಬೇಕು.

ಈಗಾಗಲೇ ಎಬಿ.ಪಿ.ಎಮ್.ಜೆ.ವೈ-ಸಿಎಮ್ ಆರೋಗ್ಯ ಕರ್ನಾಟಕ ಕಾರ್ಡ್ ಅನ್ನು ಬೇರೆ ಯಾವುದಾದರೂ ಯೋಜನೆಗೆ ನೋಂದಣಿ (ಇ-ಕೆವೈಸಿ) ಲಿಂಕ್ ಮಾಡಿಕೊಂಡಿದ್ದರೆ ನೇರವಾಗಿ ಪೊರ್ಟಲ್ನಲ್ಲಿ ಕಾರ್ಡ್ ಜನರೇಷನ್ ವೆರಿಪೈ ಎಂದು ಕಂಡು ಬರುತ್ತದೆ. ಒಂದು ವೇಳೆ ಬೇರೆ ಯಾವುದಾದರು ಯೋಜನೆಗೆ ಕಾರ್ಡ್ ಅನ್ನು ನೋಂದಣಿ ಮಾಡದೇ ಇದ್ದರೆ (ನಿಮ್ಮ ಇ-ಕೆವೈಸಿ ಹೊಂದಿಲ್ಲದಿದ್ದರೆ) ಆಧಾರ್ ಒಟಿಪಿ ಮುಖಾಂತರ ಇ-ಕೆವೈಸಿ ಮಾಡಿಕೊಂಡು ಕಾರ್ಡ್ನ್ನು ಪಡೆಯಬಹುದಾಗಿದೆ.

ಅತೀ ಮುಖ್ಯವಾಗಿ ಆಯುಷ್ಮಾನ್ ಭವಃ ಕಾರ್ಡ್ ಪಡೆಯಲು ಪ್ರತಿ ಕುಟುಂಬವು ಎಪಿಎಲ್ ಅಥವಾ ಬಿಪಿಎಲ್ ರೇಷನ್ ಕಾರ್ಡ್ ತಪ್ಪದೇ ಹೊಂದಿರಬೇಕು. ರೇಷನ್ ಕಾರ್ಡ್ಗಳಿಗೆ ಆಧಾರ್ ಸಂಖ್ಯೆ ಜೋಡಣೆಯಾಗಿರಬೇಕು. ಸಾರ್ವಜನಿಕರು ತಮ್ಮ ಸ್ಮಾರ್ಟ್ ಮೊಬೈಲ್ಗಳ ಮೂಲಕ ಯಾವುದೇ ವೆಚ್ಚವಿಲ್ಲದೇ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಆಯುಷ್ಮಾನ್ ಭವಃ ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್ಗಳನ್ನುಪಡೆದುಕೊಳ್ಳಬಹುದಾಗಿದೆ. ತಾಂತ್ರಿಕವಾಗಿ ಯಾವುದೇ ತೊಂದರೆ ಕಂಡುಬಂದಲ್ಲಿ ಸಹ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...
Entdecken Sie die besten Tipps und Tricks für ein leichteres und effizienteres Leben! Unser Blog bietet eine Fülle von Informationen zu Haushaltstipps, leckeren Rezepten und hilfreichen Artikeln über den Anbau von Gemüse im eigenen Garten. Lassen Sie sich inspirieren und erfahren Sie, wie Sie Ihren Alltag auf einfache Weise verbessern können. Viel Spaß beim Lesen! Hühnchen Rassolnik: Traditionelle Gebackenes französisches Eingelegter Sauerampfer mit Salz in der Dose Garnelentatar mit Wassermelone, Gurke und Sesam: Frische Sommerküche Gebratene Brühwurst: Eine kulinarische Mexikanischer Salat Gemüse- und Meerescocktailsalat: Eine erfrischende Kombination aus Land und Meer Hähnchen-Caprese: Ein klassisches italienisches Gericht mit einem herzhaften Twist Zucchini-Paprika-Lecho: Ein köstliches Huhn oder Truthahn: Das beste Sommerfleisch für Ihre Lieblingsgerichte Was man außer Kwas zu Okroshka bei Käsegefüllte Kartoffelbällchen Chinesische zersprungene Gurken in Gefüllte Paprika mit Kohl für den Türkischer Pide mit Hackfleisch und Tomaten: Ein Genuss aus Bento-Kuchen: Traditionelle Zubereitung Köstliches Gurkenmousse in 15 Minuten Zubereitung von Borschtsch: Ein traditionelles russisches Leckerer hausgemachter Hüttenkäsefüllung Vermeiden Sie diese Lebensmittel nachts, um Garnelensalat mit rotem Kaviar Kapern: Was Gesunder Gemüseeintopf für eine ausgewogene Köstliche selbstgemachte Gedünstete Gurken und Cashewnüsse in Kokosmilch nach Bruschetta mit Tofu, sonnengetrockneten Tomaten und Die richtige Zubereitung von braunem Reis als Beilage Entdecken Sie die besten Lebenshacks, Rezepte und nützlichen Tipps für Ihren Garten auf unserer Website. Erfahren Sie, wie Sie Ihren Alltag leichter gestalten und köstliche Gerichte zubereiten können. Unser Team von Experten teilt gerne ihr Wissen und ihre Erfahrungen mit Ihnen. Besuchen Sie uns und lassen Sie sich inspirieren!