ವಿವಾಹಿತ –ಯುವತಿ ಅಕ್ರಮ ಸಂಬಂಧ: ಬಲವಂತವಾಗಿ ಮೂತ್ರ ಕುಡಿಸಿ ಚಪ್ಪಲಿ ಹಾರ ಹಾಕಿ ಹಿಂಸೆ

ನವದೆಹಲಿ: ವ್ಯಕ್ತಿಯೊಬ್ಬರ ಕೈ ಕಾಲುಗಳನ್ನು ಹಗ್ಗದಿಂದ ಬಿಗಿದು ಬಲವಂತವಾಗಿ ಮೂತ್ರ ಕುಡಿಸಿ ಪಾದರಕ್ಷೆಯ ಹಾರ ಹಾಕಿದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ವ್ಯಕ್ತಿಯನ್ನು ಸಾರ್ವಜನಿಕವಾಗಿ ಅವಮಾನಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಂತ್ರಸ್ತನ ಸಂಬಂಧಿಕರಿಂದ ಪೊಲೀಸ್ ದೂರು ದಾಖಲಾಗಿದ್ದು, ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ಮುಂದುವರಿದಿದೆ. ವಿವಾಹಿತ ಅಮನ್ ತಮ್ಮ ಪ್ರದೇಶದ ಹುಡುಗಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದರು ಎಂಬ ಕಾರಣಕ್ಕೆ ಆರೋಪಿಗಳು ಈ ಹೇಯ ಕೃತ್ಯ ಎಸಗಿದ್ದಾರೆ.

ಶನಿವಾರ ಮಧ್ಯಾಹ್ನ 1 ಗಂಟೆಗೆ ತನ್ನ ಮಗನಿಗೆ ಕೆಲವು ಸಂಬಂಧಿಕರು ಫೋನ್ ಮೂಲಕ ಕರೆ ಮಾಡಿದ ಕೆಲವರು ಅಪಹರಿಸಿದ್ದಾರೆ ಎಂದು ಸಂತ್ರಸ್ತನ ತಂದೆ ಮತ್ತು ದೂರುದಾರ ರಾಜ್‌ಕುಮಾರ್ ಹೇಳಿದ್ದಾರೆ. ಮನೆಯಿಂದ ಹೊರಗೆ ಹೋದ ನಂತರ ಮಗ ಎಲ್ಲಿದ್ದಾನೆ ಎಂಬ ಮಾಹಿತಿ ಇರಲಿಲ್ಲ. ಕಾನೋರ್ ಗ್ರಾಮದ ಕೆಲವರು ಆತನನ್ನು ಅಪಹರಿಸಿ ದೌರ್ಜನ್ಯ ಎಸಗಿರುವುದು ನಂತರ ಬೆಳಕಿಗೆ ಬಂದಿದೆ.

ರಾಜ್‌ಕುಮಾರ್ ಮತ್ತು ಅವರ ಕುಟುಂಬವು ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಉಳಿದುಕೊಂಡಿದೆ ಮತ್ತು ಅವರು ಔಷಧೀಯ ಗಿಡಮೂಲಿಕೆಗಳನ್ನು ಮಾರಾಟ ಮಾಡುತ್ತಾರೆ. ಒಂದು ತಿಂಗಳ ಹಿಂದೆ ಅಮನ್ ಮದುವೆಯಾಗಿದ್ದರು. ಪಾಕ್ ಬಡಾ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಕಾನೋರ್ ಗ್ರಾಮದ ನಾನಕ್ ವಾಡಿಯಲ್ಲಿ ಸಂಪೂರ್ಣ ಘಟನೆ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read