ಬೆಂಗಳೂರು: ಹೊಸ ವಿದ್ಯುತ್ ಸಂಪರ್ಕ ಪಡೆಯುವ ಅವಧಿಯನ್ನು ಕರ್ನಾಟಕ ವಿದ್ಯುತ್ ಚ್ಛಕ್ತಿ ನಿಯಂತ್ರಣ ಆಯೋಗ(KERC) ಕಡಿಮೆಗೊಳಿಸಿದೆ.
ಮಹಾನಗರಗಳ ಹೊಸ ಗ್ರಾಹಕರಿಗೆ ಮೂರೇ ದಿನದಲ್ಲಿ ಹೊಸ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ವಿದ್ಯುತ್ ಸರಬರಾಜು ಕಂಪನಿಗಳಿಗೆ ಆದೇಶ ಹೊರಡಿಸಿದೆ ಗ್ರಾಹಕರು ಹೊಸ ವಿದ್ಯುತ್ ಸಂಪರ್ಕ ಕೋರಿ ಅರ್ಜಿ ಸಲ್ಲಿಸಿದ ಮೂರು ದಿನಗಳ ಕಾಲ ಮಿತಿಯೊಳಗೆ ಸಂಪರ್ಕ ಕಲ್ಪಿಸಬೇಕು. ಮುನ್ಸಿಪಲ್ ಪ್ರದೇಶಗಳ ವ್ಯಾಪ್ತಿಯಲ್ಲಿ 7 ದಿನಗಳೊಳಗೆ ಹೊಸ ವಿದ್ಯುತ್ ಸಂಪರ್ಕ ನೀಡಬೇಕು. ಗ್ರಾಮೀಣ ಪ್ರದೇಶಗಳ ಗ್ರಾಹಕರಿಗೆ 15 ದಿನಗಳೊಳಗೆ ಹೊಸ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹೊಸ ಸಂಪರ್ಕ ನೀಡಲು ಹೊಸ ಮೇನ್ಸ್ ಎಳೆಯಬೇಕಾದಲ್ಲಿ ಅಥವಾ ಹೊಸ ವಿದ್ಯುತ್ ಉಪ ಕೇಂದ್ರದ ಸ್ಥಾಪನೆ ಆಗಬೇಕಿದ್ದರೆ ಅಂತಹ ಸೌಲಭ್ಯ ಪೂರ್ಣಗೊಂಡ ತಕ್ಷಣವೇ ವಿದ್ಯುತ್ ಸಂಪರ್ಕ ಒದಗಿಸಬೇಕು. ಇದಕ್ಕೆ ಗರಿಷ್ಠ 90 ದಿನಗಳ ಕಾಲಾವಕಾಶ ನೀಡಲಾಗಿದೆ.