alex Certify ಡಿಸಿಎಂ ಡಿಕೆಶಿ ಸೇರಿ ಹಿರಿಯ ನಾಯಕರ ಅಸಮಾಧಾನ ಹಿನ್ನಲೆ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಸಿಎಂ ಡಿಕೆಶಿ ಸೇರಿ ಹಿರಿಯ ನಾಯಕರ ಅಸಮಾಧಾನ ಹಿನ್ನಲೆ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ

ಬೆಂಗಳೂರು: ತಾವು ಶಿಫಾರಸು ಮಾಡಿದ್ದ ಕೆಲವು ಹೆಸರುಗಳನ್ನು ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಯಿಂದ ಕೈ ಬಿಟ್ಟಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪಟ್ಟಿಯನ್ನು ಮತ್ತೆ ಪರಿಷ್ಕರಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಸೂಚಿಸಿದವರ ಹೆಸರನ್ನು ಕೂಡ ಬದಲಾವಣೆ ಮಾಡಿದ್ದು, ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಗೊಂದಲದ ಗೂಡಾಗಿತ್ತು. ಕಾಂಗ್ರೆಸ್ ತೊರೆದು ಜೆಡಿಎಸ್ ಗೆ ಸೇರ್ಪಡೆಯಾಗಿರುವ ಅಮರಾವತಿ ಚಂದ್ರಶೇಖರ್ ಅವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆ, ಒಂದೇ ಕುಟುಂಬದವರಿಗೆ ಎರಡು ಹುದ್ದೆ ಸೇರಿದಂತೆ ಹಲವು ರೀತಿಯ ಗೊಂದಲಗಳು ಉಂಟಾಗಿದ್ದವು.

ಗೊಂದಲ ಮತ್ತು ಅಸಮಾಧಾನದ ಬೆನ್ನಲ್ಲೇ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಯನ್ನು ಎಐಸಿಸಿ ಪರಿಷ್ಕರಿಸಿ ಪ್ರಕಟಿಸಿದೆ. ಏಪ್ರಿಲ್ 1ರಂದು ಬಿಡುಗಡೆಯಾದ 43 ಉಪಾಧ್ಯಕ್ಷರು, 138 ಪ್ರಧಾನ ಕಾರ್ಯದರ್ಶಿಗಳ ಪಟ್ಟಿಗೆ ಹಿರಿಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೆಲವು ಹೆಸರುಗಳನ್ನು ಕೈಬಿಟ್ಟು ಮತ್ತೆ ಕೆಲವು ಹೆಸರುಗಳನ್ನು ಸೇರ್ಪಡೆ ಮಾಡಿ ಪ್ರಕಟಿಸಲಾಗಿದೆ.

ಪರಿಷ್ಕರಿಸಲಾದ ಪಟ್ಟಿಯಲ್ಲಿ 44 ಉಪಾಧ್ಯಕ್ಷರು, 144 ಪ್ರಧಾನ ಕಾರ್ಯದರ್ಶಿಗಳಿದ್ದಾರೆ. ಡಾ. ಸುಶ್ರುತ ಗೌಡ, ಭವ್ಯಾ ನರಸಿಂಹಮೂರ್ತಿ, ಬಿ.ಆರ್. ನಾಯ್ಡು ಅವರನ್ನು ನೇಮಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...