ಇದು ಹೋರಾಟದ ಸಮಯ, ಜೈಲಲ್ಲಿರುವ ನಮ್ಮ ನಾಯಕರು ಕೂಡ ಶೀಘ್ರವೇ ಹೊರಬರುತ್ತಾರೆ: 6 ತಿಂಗಳ ಬಳಿಕ ತಿಹಾರ್ ಜೈಲಿಂದ ಹೊರ ಬಂದ ಆಪ್ ಸಂಸದ ಸಂಜಯ್ ಸಿಂಗ್

ನವದೆಹಲಿ: 6 ತಿಂಗಳ ಬಳಿಕ ತಿಹಾರ್ ಜೈಲಿಂದ ಆಪ್ ಸಂಸದ ಸಂಜಯ್ ಸಿಂಗ್ ಹೊರ ಬಂದಿದ್ದು, ಪಕ್ಷದ ಕಾರ್ಯಕರ್ತರು ಭರ್ಜರಿ ಸ್ವಾಗತ ನೀಡಿದ್ದಾರೆ.

ಸಂಜಯ್ ಸಿಂಗ್ ಬಿಡುಗಡೆ ಹಿನ್ನಲೆಯಲ್ಲಿ ಎಎಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ.

ದೆಹಲಿಯ ಅಬಕಾರಿ ನೀತಿ ಪರಿಷ್ಕರಣೆ ಪ್ರಕರಣದಲ್ಲಿ ಸಂಜಯ್ ಸಿಂಗ್ ಅವರನ್ನು ಬಂಧಿಸಲಾಗಿತ್ತು. ಅಕ್ರಮ ವರ್ಗಾವಣೆ ಪ್ರಕರಣದಲ್ಲಿ 2023ರ ಅಕ್ಟೋಬರ್ 4ರಂದು ಇಡಿ ಅಧಿಕಾರಿಗಳು ಸಂಜಯ್ ಸಿಂಗ್ ಅವರನ್ನು ಬಂಧಿಸಿದ್ದರು. ಫೆಬ್ರವರಿ 9ರಂದು ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿದ್ದು, ಸುಪ್ರೀಂ ಕೋರ್ಟ್ ನಿನ್ನೆ ಷರತ್ತು ಬದ್ಧ ಜಾಮೀನು ನೀಡಿತ್ತು.

ಇದು ಹೋರಾಟದ ಸಮಯ. ಜೈಲಿನಲ್ಲಿರುವ ನಮ್ಮ ನಾಯಕರು ಕೂಡ ಶೀಘ್ರದಲ್ಲೇ ಹೊರಬರುತ್ತಾರೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.

ಸಿಎಂ ನಿವಾಸಕ್ಕೆ ಅಂಜಯ್ ಸಿಂಗ್ ಭೇಟಿ

ಸಂಜಯ್ ಸಿಂಗ್ ಅವರು ತಿಹಾರ್ ಜೈಲಿನಿಂದ ಹೊರಬಂದ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನೆಗೆ ತೆರಳಿ ಸಿಎಂ ಪತ್ನಿ ಸುನಿತಾ ಕೇಜ್ರಿವಾಲ್ ಅವರನ್ನು ಭೇಟಿಯಾಗಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read