
ಬೆಂಗಳೂರು: ಅರ್ಬನ್ ಬ್ಯಾಂಕ್ ಕೋ ಆಪರೇಟಿವ್ ಸೊಸೈಟಿಯ ಎಜಿಓ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಚೇರಿಯಲ್ಲಿ 40,000 ರೂ. ಲಂಚ ಪಡೆಯುತ್ತಿದ್ದ ಅಧಿಕಾರಿ ಶುಭಾ ವಾಡ್ಕರ್ ಬಲೆಗೆ ಬಿದ್ದವರು.
ಕನ್ನಿಂಗ್ ಹ್ಯಾಂ ರಸ್ತೆ ಸಮೀಪ ಇರುವ ಸಹಕಾರ ಸಂಘಗಳ ನಿಬಂಧಕರ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಶಿರಸಿಯಲ್ಲಿರುವ ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ. ನೌಕರರ ಸಂಘಕ್ಕೆ ವ್ಯವಸ್ಥಾಪಕ ಪ್ರತಿನಿಧಿ ನೇಮಿಸಲು ಲಂಚ ಸ್ವೀಕರಿಸುತ್ತಿದ್ದರು. ಲಂಚ ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಲಾಗಿದೆ. ಶುಭಾ ಅವರನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.