ಅನಿಲ್ ಕುಮಾರ್ ನಿರ್ದೇಶನದ ಚಿಕ್ಕಣ್ಣ ಅಭಿನಯದ ಉಪಾಧ್ಯಕ್ಷ ಚಿತ್ರ ಇದೇ ವರ್ಷ ಜನವರಿ 24ರಂದು ಬಿಡುಗಡೆಯಾಗಿತ್ತು ಅಂದುಕೊಂಡಂತೆ ಈ ಸಿನಿಮಾ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಮೂಲಕ ಸೂಪರ್ ಡೂಪರ್ ಹಿಟ್ ಆಗಿತ್ತು ಇದೀಗ ಉಪಾಧ್ಯಕ್ಷ ಶೀಘ್ರದಲ್ಲೇ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
ಈ ಚಿತ್ರದಲ್ಲಿ ಚಿಕ್ಕಣ್ಣ ಅವರಿಗೆ ಜೋಡಿಯಾಗಿ ಮಲೈಕಾ ವಸುಪಾಲ್ ಅಭಿನಯಿಸಿದ್ದು, ರವಿಶಂಕರ್ ಸಾಧುಕೋಕಿಲ, ವೀಣಾ ಸುಂದರ್, ಧರ್ಮಣ್ಣ ಕಡೂರ್, ಕರಿ ಸುಬ್ಬು, ಕೀರ್ತಿರಾಜ್, ತಾರಾ ಬಳಗದಲ್ಲಿದ್ದಾರೆ. ನಟ ಶರಣ್ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. d.n ಸಿನಿಮಾಸ್ ಮತ್ತು ಉಮಾಪತಿ ಫಿಲಂಸ್ ಬ್ಯಾನರ್ ನಲ್ಲಿ ಸ್ಮಿತಾ ಉಮಾಪತಿ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದು, ಕೆ ಎಂ ಪ್ರಕಾಶ್ ಸಂಕಲನ, ಶೇಖರ್ ಚಂದ್ರ ಛಾಯಗ್ರಹಣವಿದೆ.