ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿರುವ ಜಿ.ಟಿ.ದೇವೇಗೌಡ ಏನು ಕಡೆದು ಕಟ್ಟೆ ಹಾಕಿದ್ದಾರೆ? ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕಿಡಿಕಾರಿರುವ ಜಿ.ಟಿ.ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಇಒ, ತಹಶೀಲ್ದಾರ್ ಎಲ್ಲ ಸಿಎಂ ಬಂಧುಗಳು. ಎಷ್ಟು ದಿನ ಸಿಎಂ ಆಗಿರ್ತೀರಿ? ಎಷ್ಟು ನೋವು ಕೊಡುತ್ತೀರಿ? ಪದೇ ಪದೇ ಯಾಕೆ ಚುಚ್ಚಿ ಮಾತನಾಡುತ್ತೀರಿ? ಎಂದು ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಜಿ.ಟಿ.ದೇವೇಗೌಡ, 35 ಸಾವಿರ ಮತಗಳ ಅಂತರದಿಂದ ನಾನು ನಿಮ್ಮನ್ನು ಸೋಲಿಸಿದಾಗಲೂ ನಿಮ್ಮ ಬಗ್ಗೆ ಗೌರವದಿಂದ ಇದ್ದೇನೆ. ಎಂದೂ ಅಗೌರವದಿಂದ ಮಾತನಾಡಿಲ್ಲ. ಹೆಸರಿಗೆ ನಾನು ಶಾಸಕ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎಲ್ಲವೂ ನಿಮ್ದೆ. ಪದೇ ಪದೇ ಚುಚ್ಚಿ ಮಾತನಾಡುವ ಬದಲು ಸುಮ್ಮನಿದ್ದುಬಿಡಿ ಎಂದು ಹೇಳಿದ್ದಾರೆ.
ಗುತ್ತಿಗೆದಾರರು ಕಮಿಷನ್ ನ್ನು ನಿಮ್ಮ ಪುತ್ರನಿಗೆ ನೀಡಬೇಕು. ಯತೀಂದ್ರ ಸಿದ್ದರಾಮಯ್ಯ ನಮ್ಮ ಕ್ಷೇತ್ರದಲ್ಲಿ ಕಮಿಷನ್ ದಂಧೆ ಮಾಡ್ತಿದ್ದಾರೆ. ವರುಣದಲ್ಲಿ ನೀವು ಬಿಜೆಪಿಯ ದೊಡ್ದವರ ಬೆಂಬಲ ಪಡೆದು ಗೆದ್ದಿಲ್ವಾ? ಸಿದ್ದರಾಮಯ್ಯ ಸರ್ಕಾರ ಕಮಿಷನ್ ಸರ್ಕಾರ. 60% ಕಮಿಷನ್ ಸರ್ಕಾರವಾಗಿದೆ ಎಂದು ಕಿಡಿಕಾರಿದ್ದಾರೆ.