HomeEntertainment'ಆಗಮಿ' ಕಿರು ಚಿತ್ರದ ಟೀಸರ್ ರಿಲೀಸ್

‘ಆಗಮಿ’ ಕಿರು ಚಿತ್ರದ ಟೀಸರ್ ರಿಲೀಸ್

ಶ್ರೀ ಮುರಳಿ ಪ್ರಸಾದ್ ಕಥೆ ಬರೆದು ನಿರ್ದೇಶಿಸಿರುವ ‘ಆಗಮಿ’ ಎಂಬ ಕಿರುಚಿತ್ರದ ಟೀಸರನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಕಿರು ಚಿತ್ರದ ಟೀಸರ್ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವುದಲ್ಲದೆ, ನೋಡುಗರಲ್ಲಿ ಕುತೂಹಲ ಕೆರಳಿಸುವಂತೆ ಮಾಡಿದೆ.

ಈ ಕಿರು ಚಿತ್ರದಲ್ಲಿ ಮುರಳಿ, ಕೃಷ್ಣ, ಷಡಕ್ಷರಿ, ಶ್ವೇತಾ, ಭಾಸ್ಕರ್, ಆದಿ ಮತ್ತು ಲಕ್ಷ್ಮಿ ಅಭಿನಯಿಸಿದ್ದು, ಫಿನಾಮಿನಲ್ ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದೆ. ಪಾಂಡುರಂಗ ಅವರ ಸಂಕಲನ, ಮತ್ತು ಛಾಯಾಗ್ರಹಣವಿದೆ. ಇನ್ನೇನು ಕೆಲವೇ ದಿನಗಳಲ್ಲಿ ಯೂಟ್ಯೂಬ್ ನಲ್ಲಿ ರಿಲೀಸ್ ಆಗಲಿದೆ.

For Latest News Updates, Join Our Whatsapp Community🚩
RELATED ARTICLES

Most Popular