HomeKarnatakaBIG NEWS: ನನಗೂ ಅವರ ಅವಶ್ಯಕತೆ ಇಲ್ಲ; ಮಂಡ್ಯದಲ್ಲೇ ನನ್ನ ನಿರ್ಧಾರ ತಿಳಿಸುವೆ ಎಂದ ಸಂಸದೆ...

BIG NEWS: ನನಗೂ ಅವರ ಅವಶ್ಯಕತೆ ಇಲ್ಲ; ಮಂಡ್ಯದಲ್ಲೇ ನನ್ನ ನಿರ್ಧಾರ ತಿಳಿಸುವೆ ಎಂದ ಸಂಸದೆ ಸುಮಲತಾ

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚಿಸಲು ಸಂಸದೆ ಸುಮಲತಾ ಇಂದು ಮಂಡ್ಯದಲ್ಲಿ ಬೆಂಬಲಿಗರ ಸಭೆ ಕರೆದಿದ್ದು, ಬೆಳಿಗ್ಗೆ 10:30ಕ್ಕೆ ಸಭೆ ನಡೆಯಲಿದೆ. ಸುಮಲತಾ ರಾಜಕೀಯ ನಡೆ ತೀವ್ರ ಕುತೂಹಲ ಮೂಡಿಸಿದೆ.

ಮಂಡ್ಯಕ್ಕೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಸುಮಲತಾ, ನನ್ನ ನಿರ್ಧಾರವನ್ನು ಮಂಡ್ಯದಲ್ಲಿಯೇ ತಿಳಿಸುತ್ತೇನೆ. ಅಂಬರೀಶ್ ಯಾವತ್ತೂ ಅಧಿಕಾರಕ್ಕಾಗಿ ಆಸೆಪಟ್ಟವರಲ್ಲ. ನಾನೂ ಅಂಬರೀಶ್ ಅವರನ್ನು ನೋಡಿಕೊಂಡು ಬದಿದ್ದೇನೆ. ಇಂದು ನಟ ದರ್ಶನ್, ಅಭಿಷೇಕ್ ಮಂಡ್ಯಕ್ಕೆ ಆಗಮಿಸುತ್ತಾರೆ. ಮಂಡ್ಯದಲ್ಲಿಯೇ ನನ್ನ ರಾಜಕೀಯ ನಡೆ ಬಗ್ಗೆ ತಿಳಿಸುತ್ತೇನೆ ಎಂದರು.

ಕಾಂಗ್ರೆಸ್ ಗೆ ಸುಮಲತಾ ಅವರ ಅವಶ್ಯಕತೆ ಇಲ್ಲ ಎಂದು ಹೇಳಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಗರಂ ಆದ ಸುಮಲತಾ, ಯಾರು ಕುಂಬಳ ಕಾಯಿ ಕಳ್ಳ ಎಂಬುದು ದೇಶಕ್ಕೆ ಗೊತ್ತಿದೆ. ನನ್ನ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ನನಗೂ ಬೇಕಿಲ್ಲ. ನನಗೂ ಅವರ ಅವಶ್ಯಕತೆ ಇಲ್ಲ ಎಂದು ಹೇಳಿದರು. ಈಮೂಲಕ ಸುಮಲತಾ ಕಾಂಗ್ರೆಸ್ ನತ್ತ ಮುಖ ಮಾಡಲ್ಲ ಎಂಬುದನ್ನು ಪರೋಕ್ಷವಾಗಿ ಸ್ಪಷ್ಟ ಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular