HomeKarnatakaಬ್ಯಾಂಕ್ ಅಧಿಕಾರಿಗಳಿಂದಲೇ SBI ಗೆ 9.71 ಕೋಟಿ ರೂ. ವಂಚನೆ: 220 ಮಂದಿ ವಿರುದ್ಧ ದೂರು

ಬ್ಯಾಂಕ್ ಅಧಿಕಾರಿಗಳಿಂದಲೇ SBI ಗೆ 9.71 ಕೋಟಿ ರೂ. ವಂಚನೆ: 220 ಮಂದಿ ವಿರುದ್ಧ ದೂರು

ಮೈಸೂರು: ಬ್ಯಾಂಕ್ ಅಧಿಕಾರಿಗಳೇ ಸೇರಿಕೊಂಡು ಅರ್ಹತೆ ಇಲ್ಲದವರಿಗೆ 9.71 ಕೋಟಿ ರೂಪಾಯಿಗೆ ಸಾಲ ನೀಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಲಷ್ಕರ್ ಪೊಲೀಸ್ ಠಾಣೆಗೆ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಆರ್.ಡಿ. ಸುಂದರೇಶ್ ದೂರು ನೀಡಿದ್ದಾರೆ.

ಮೈಸೂರಿನ ಲಷ್ಕರ್ ಮೊಹಲ್ಲಾದಲ್ಲಿರುವ ಎಸ್‌ಬಿಐ ನಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ನಕಲಿ ವಿಳಾಸ, ದಾಖಲೆ ಸೃಷ್ಟಿಸಿ ಬ್ಯಾಂಕಿನಿಂದ 9.71 ಕೋಟಿ ರೂಪಾಯಿ ಸಾಲ ನೀಡುವಲ್ಲಿ ಬ್ಯಾಂಕಿನ ಅಧಿಕಾರಿಗಳು, ಮಧ್ಯವರ್ತಿಗಳು ಮತ್ತು ಸಾಲ ಪಡೆದವರು ಸೇರಿ 220 ಮಂದಿ ವಿರುದ್ಧ ನೀಡಲಾಗಿದೆ.

ಸಾಲ ಪಡೆದುಕೊಳ್ಳಲು ವೇತನದ ಅರ್ಹತೆ ಇಲ್ಲದಿದ್ದರೂ ಸಿಬಿಲ್ ಸ್ಕೋರ್ ದಾಖಲಾತಿಗಳನ್ನು ತಿದ್ದಲಾಗಿದೆ. ಹೊರ ಊರಿನ ವಿಳಾಸವಿದ್ದರೂ ಮಧ್ಯವರ್ತಿಗಳು ಮತ್ತು ನೌಕರರ ಸಹಕಾರದೊಂದಿಗೆ ಸುಳ್ಳು ವಿಳಾಸ ಸೇರಿ ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ವಂಚಿಸಲಾಗಿದೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular