ರಷ್ಯಾದಲ್ಲಿ ಚಿನ್ನದ ಗಣಿ ಕುಸಿದು 13 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಾರ್ಚ್ 18 ರಿಂದ ಚಿನ್ನದ ಗಣಿಯೊಳಗೆ ಸಿಕ್ಕಿಬಿದ್ದ 13 ಗಣಿಗಾರರನ್ನು ರಕ್ಷಿಸುವ ಉದ್ದೇಶದಿಂದ ರಷ್ಯಾ ಸೋಮವಾರ (ಏಪ್ರಿಲ್ 1) ರಕ್ಷಣಾ ಕಾರ್ಯಾಚರಣೆಯನ್ನು ನಿಲ್ಲಿಸಿದ್ದು, ಗಣಿಯಲ್ಲಿ ಸಿಕ್ಕಿಬಿದ್ದ 13 ಜನರೂ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಸುಮಾರು 125 ಮೀಟರ್ (400 ಅಡಿ) ಆಳದಲ್ಲಿ ರಷ್ಯಾದ ಅತಿದೊಡ್ಡ ಗಣಿಗಳಲ್ಲಿ ಒಂದಾದ ಪಯೋನೀರ್ ಗಣಿಯಲ್ಲಿ ಕೆಲಸ ಮಾಡುವಾಗ ಬಂಡೆ ಕುಸಿದ ನಂತರ ಗಣಿ ಕಾರ್ಮಿಕರು ಸಿಕ್ಕಿಬಿದ್ದರು. ಕಾರ್ಮಿಕರನ್ನು ರಕ್ಷಿಸುವಲ್ಲಿ ರಕ್ಷಣಾ ಸಿಬ್ಬಂದಿಗಳು ಭಾರಿ ಶ್ರಮ ವಹಿಸಿದ್ದರು.