
ಗದಗ: ಹಾವೇರಿ -ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ವಿಷಾದ ವ್ಯಕ್ತಪಡಿಸಿದ್ದಾರೆ.
ಬೊಮ್ಮಾಯಿ ಅವರನ್ನು ದಾವಣಗೆರೆ ಚಾರ್ಲಿಗೆ ಹೋಲಿಸಿದ್ದೆ. ಉತ್ತರ ಕರ್ನಾಟಕದಲ್ಲಿ ಹೆಸರು ಮಾಡಿರುವ ಹಿರಿಯ ಪೈಲ್ವಾನ್ ಚಾರ್ಲಿ ರೀತಿ ಬೊಮ್ಮಾಯಿ ಕೂಡ ಹಿರಿಯ ಪೈಲ್ವಾನ್ ಅವರಿಗೆ ವಯಸ್ಸಾಗಿದೆ, ಮುದುಕರಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆನಂದ ಸ್ವಾಮಿ ಯುವ ಪೈಲ್ವಾನ್ ಆಗಿ ಅಖಾಡದಲ್ಲಿದ್ದಾರೆ. ಹಿರಿಯ ಮತ್ತು ಕಿರಿಯ ಪೈಲ್ವಾನ್ ಗಳ ರೀತಿ ಇಬ್ಬರನ್ನು ಹೋಲಿಕೆ ಮಾಡಿದ್ದೆ. ಬೊಮ್ಮಾಯಿಯವರು ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ನನ್ನ ಮಾತಿನಿಂದ ನೋವಾಗಿದ್ದರೆ ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೆಚ್.ಕೆ. ಪಾಟೀಲ್ ಹೇಳಿದ್ದಾರೆ.