alex Certify ತನ್ನ ರಾಜಧಾನಿಯನ್ನೇ ಬದಲಾಯಿಸುತ್ತಿದೆ ಈ ದೇಶ, ಶತಕೋಟಿ ಡಾಲರ್ ವೆಚ್ಚದಲ್ಲಿ ಹೊಸ ನಗರ ನಿರ್ಮಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ರಾಜಧಾನಿಯನ್ನೇ ಬದಲಾಯಿಸುತ್ತಿದೆ ಈ ದೇಶ, ಶತಕೋಟಿ ಡಾಲರ್ ವೆಚ್ಚದಲ್ಲಿ ಹೊಸ ನಗರ ನಿರ್ಮಾಣ

ಇಂಡೋನೇಷ್ಯಾ ತನ್ನ ರಾಜಧಾನಿಯನ್ನು ಬದಲಾಯಿಸುವ ಸಿದ್ಧತೆಯಲ್ಲಿದೆ. ಅಲ್ಲಿ ಸಂಸತ್ತು ಈಗಾಗ್ಲೇ ಜಕಾರ್ತಾಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದು, ಅದನ್ನು ದೇಶದ ಆರ್ಥಿಕ ಕೇಂದ್ರವಾಗಿ ಮಾಡಲಾಗಿದೆ. ಇಂಡೋನೇಷ್ಯಾ ತನ್ನ ರಾಜಧಾನಿಯನ್ನು ಜನನಿಬಿಡ ಹಾಗೂ ಸದಾ ಮುಳುಗಡೆ ಭೀತಿಯಲ್ಲಿರೋ ಜಕಾರ್ತಾದಿಂದ ದೂರಕ್ಕೆ ಸ್ಥಳಾಂತರಿಸುತ್ತಿದೆ. 32 ಶತಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನುಸಂತಾರಾ ನಗರವು ದೇಶದ ಹೊಸ ರಾಜಧಾನಿಯಾಗಲಿದೆ. ಇದು ಬೋರ್ನಿಯೊದ ಪೂರ್ವ ಕಾಲಿಮಂಟನ್ ಅರಣ್ಯದಲ್ಲಿದೆ.

ನುಸಂತಾರಾ ನಗರ ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೊ ಅವರ ಕನಸು. ಪ್ರಸ್ತುತ ಜಾವಾದಲ್ಲಿ ಕೇಂದ್ರೀಕೃತವಾಗಿರುವ ದ್ವೀಪಸಮೂಹದಾದ್ಯಂತ ಹಣ ಮತ್ತು ಅಭಿವೃದ್ಧಿಯನ್ನು ಮರುಹಂಚಿಕೆ ಮಾಡುವುದಾಗಿ ಈಗಾಗ್ಲೇ ಅವರು ಭರವಸೆ ನೀಡಿದ್ದಾರೆ.

ಮಾರ್ಚ್ 18ರ ಹೊಸ ಕಾನೂನಿನ ಪ್ರಕಾರ ಜಕಾರ್ತಾ ಮತ್ತು ಅದರ ಉಪಗ್ರಹ ನಗರಗಳ ನಡುವಿನ ಅಭಿವೃದ್ಧಿ ಯೋಜನೆಗಳನ್ನು ಸಂಘಟಿಸಲು ಮಂಡಳಿಯೊಂದು ರಚನೆಯಾಗಲಿದೆ. ರಾಜಧಾನಿ ನುಸಂತಾರಾಗೆ ಸ್ಥಳಾಂತರಗೊಂಡ ನಂತರ ಜಕಾರ್ತಾವನ್ನು ಕಡೆಗಣಿಸಬಾರದು ಎಂಬುದು ಅಲ್ಲಿನ ಸಚಿವರುಗಳ ಒತ್ತಾಯ. ಜಕಾರ್ತಾವನ್ನು ಇತರ ವಿಶ್ವ ದರ್ಜೆಯ ನಗರಗಳೊಂದಿಗೆ ಸ್ಪರ್ಧಿಸಲು ಸುಧಾರಿಸುವ ಅಗತ್ಯವಿದೆಯೆಂದು ಅವರು ಪ್ರತಿಪಾದಿಸಿದ್ದಾರೆ.

ರಾಜಧಾನಿ ಅಲ್ಲದಿದ್ದರೂ ಜಕಾರ್ತಾಕ್ಕೆ ವಿಶೇಷ ಸ್ಥಾನಮಾನ ನೀಡಬೇಕು. ಇದರಿಂದ ಅಲ್ಲಿನ ಆರ್ಥಿಕ ಬೆಳವಣಿಗೆ ವೇಗ ಪಡೆದುಕೊಳ್ಳುತ್ತದೆ, ದೇಶದ ಜಿಡಿಪಿಗೆ ಇದು ಕೊಡುಗೆ ನೀಡುತ್ತದೆ ಎಂಬ ಅಭಿಪ್ರಾಯ ಕೇಳಿಬಂದಿದೆ.

ಪ್ರಸ್ತುತ ನಿಯಮಗಳ ಪ್ರಕಾರ ಅಧ್ಯಕ್ಷರು ಅಧಿಕೃತವಾಗಿ ನುಸಂತಾರಾವನ್ನು ಹೊಸ ರಾಜಧಾನಿಯಾಗಿ ನೇಮಿಸುವ ಆದೇಶವನ್ನು ಹೊರಡಿಸುವವರೆಗೆ ಜಕಾರ್ತಾ ಇಂಡೋನೇಷ್ಯಾದ ರಾಜಧಾನಿಯಾಗಿ ಉಳಿಯುತ್ತದೆ. ಆಗಸ್ಟ್ 17 ರಂದು ನುಸಂತಾರಾದಲ್ಲಿ 2024ರ ಸ್ವಾತಂತ್ರ್ಯ ದಿನಾಚರಣೆ ಮಾಡಲು ಸರ್ಕಾರ ಇಚ್ಛಿಸಿದೆ. ಹಾಗಾಗಿ ಈ ವರ್ಷಾಂತ್ಯದೊಳಗೆ ಅಧಿಕೃತವಾಗಿ ಇಂಡೋನೇಷ್ಯಾದ ರಾಜಧಾನಿ ಬದಲಾಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...