ಸೋಶಿಯಲ್ ಮೀಡಿಯಾದಲ್ಲಿ ಕೆಲವು ಘಟನೆಗಳ ವೀಡಿಯೊಗಳು ಅಥವಾ ಫೋಟೋಗಳು ಆಗಾಗ್ಗೆ ವೈರಲ್ ಆಗುತ್ತಲೇ ಇರುತ್ತದೆ. ಇದು ಪ್ರಚಲಿತ ಸಾಮಾಜಿಕ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತರುತ್ತದೆ.
ಸೋಮವಾರ ಹೋಳಿ ಹಬ್ಬವನ್ನು ದೇಶಾದ್ಯಂತ ಬಹಳ ಉತ್ಸಾಹದಿಂದ ಆಚರಿಸಲಾಯಿತು. ಹೋಳಿಗೆ ಸಂಬಂಧಿಸಿದ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ನೆಟ್ಟಿಗರ ಸಿಟ್ಟಿಗೆ ಕಾರಣವಾಗಿದೆ. ವೀಡಿಯೊದಲ್ಲಿ ಹಲವರು ಸುತ್ತಾನಿಂತು ದಂಪತಿಗಳ ಮೇಲೆ ನೀರನ್ನು ಎರಚುವುದನ್ನು ಕಾಣಬಹುದಾಗಿದೆ.
ಗುರ್ಪ್ರೀತ್ ಸಿಂಗ್ ಮಾನ್ ಎಂಬ ಬಳಕೆದಾರರು ಎಕ್ಸ್ ನಲ್ಲಿ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ, “ವಾರಣಾಸಿಯ ಈ ವೀಡಿಯೊ ತುಂಬಾ ಭಯಾನಕವಾಗಿದೆ. ಹೋಳಿ ಆಚರಣೆಯ ಹೆಸರಿನಲ್ಲಿ ಕೆಲವು ಗೂಂಡಾಗಳು ಮಹಿಳೆಗೆ ಆಕೆಯ ಸಂಗಾತಿಯ ಮುಂದೆ ಕಿರುಕುಳ ನೀಡುತ್ತಿದ್ದಾರೆ. ಈ ಕೃತ್ಯ ನಾಚಿಕೆಗೇಡಿನ ಸಂಗತಿ’ ಎಂದು ಕಿಡಿಕಾರಿದ್ದಾರೆ.
This video is from Varanasi is so horrific.. Some goons are embracing to lady in front of her partner in the name of #HoliCelebrations .. This act is shameless
— ɢᴜʀᴘʀᴇᴇᴛ ꜱɪɴɢʜ ᴍᴀᴀɴ (@iamgurpreetmaan) March 27, 2024

