ಬೆಂಗಳೂರು: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕರಿಗೆ ಕೊಂಚ ನಿರಾಳ ಸುದ್ದಿ. ಈ ಹಿಂದೆ ಇದ್ದ ಡಬಲ್ ಡ್ಯೂಟಿ ಅನಿವಾರ್ಯತೆಗೆ ಬ್ರೇಕ್ ಹಾಕಲಾಗಿದ್ದು, ವಿಶ್ರಾಂತಿ ಕಡ್ಡಾಯಗೊಳಿಸಲಾಗಿದೆ.
ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕರು ಈ ಹಿಂದೆ ಡಬಲ್ ಡ್ಯೂಟಿ ಮಾಡುವ ಅನಿವಾರ್ಯತೆ ಇತ್ತು. ಇದರಿಂದ ಅಪಘತಗಳ ಸಂಖ್ಯೆಯೂ ಹೆಚ್ಚುತ್ತಿತ್ತು. ವಿಶ್ರಾಂತಿ, ನಿದ್ದೆಯಿಲ್ಲದೇ ಡಬಲ್ ಡ್ಯೂಟಿ ಮಾಡುವುದರಿಂದ ಅಪಘಾತಗಳು ಹೆಚ್ಚುತ್ತಿದ್ದವು. ಈ ಹಿನ್ನೆಲೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿರುವ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕರಿಗೆ ಡಬಲ್ ಡ್ಯೂಟಿಯಿಂದ ಮುಕ್ತಿ ನೀಡಿದೆ.
ಬಸ್ ಚಾಲಕರಿಗೆ ವಿಶ್ರಾಂತಿ ಕಡ್ಡಾಯ ಎಂದು ಆದೇಶ ಹೊರಡಿಸಿದೆ. ಇದರಿಂದ ರಾತ್ರಿ ಹಾಗೂ ದೂರದ ಪ್ರಯಾಣದ ನಂತರ ಚಾಲಕರು ವಿಶ್ರಾಂತಿ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ಬಸ್ ಚಾಲಕರು 8 ಗಂಟೆಗಿಂತ ಹೆಚ್ಚುವರಿ ಡ್ಯೂಟಿ ಮಾಡುವಂತಿಲ್ಲ. ಮಾಡಿದರೆ 4-5 ಗಂಟೆಗಳ ಕಾಲ ವಿಶ್ರಾಂತಿ ಪಡೆಯಬೇಕು. ವಾರದಲ್ಲಿ ಕೆಲಸದ ಅವಧಿ 48 ಗಂಟೆ ಡಾಟುವಂತಿಲ್ಲ ಎಂದು ಸೂಚಿಸಲಾಗಿದೆ.