ಕಿರಣ್ ರಾಜ್ ಅಭಿನಯದ ‘ಭರ್ಜರಿ ಗಂಡು’ ಚಿತ್ರದ ”ಹುಯ್ಯೋ ಹುಯ್ಯೋ”ಎಂಬ ವಿಡಿಯೋ ಹಾಡು ಇಂದು ಸಂಜೆ 6:30ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಖ್ಯಾತ ಗಾಯಕ ರಘು ದೀಕ್ಷಿತ್ ಈ ಹಾಡಿಗೆ ಧ್ವನಿಯಾಗಿದ್ದು, ಗುಮ್ಮಿನೇನಿ ವಿಜಯ್ ಸಂಗೀತ ಸಂಯೋಜನೆ ನೀಡಿದ್ದಾರೆ. ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ.
ಈ ಚಿತ್ರವನ್ನು ಪ್ರಸಿದ್ಧ್ ನಿರ್ದೇಶಿಸಿದ್ದು, ಕಿರಣ್ ರಾಜ್ ಮತ್ತು ಯಶ ಶಿವಕುಮಾರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಪ್ರಸಿದ್ಧ್ ಸಿನಿಮಾಸ್ ಕ್ಯಾಂಪ್ ಬ್ಯಾನರ್ ನಲ್ಲಿ ಮದನ್ ಗೌಡ, ಪ್ರಸಿದ್ಧ್, ಮತ್ತು ಅನಿಲ್ ಕುಮಾರ್ ಬಂಡವಾಳ ಹೂಡಿದ್ದಾರೆ. ವೆಂಕಿ ಸಂಕಲನ, ಕಿಟ್ಟಿ ಕೌಶಿಕ್ ಛಾಯಾಗ್ರಹಣವಿದೆ.