ಬೆಂಗಳೂರು: 5, 8, 9ನೇ ತರಗತಿ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆಯಲ್ಲಿ ಈಗಾಗಲೇ ನಡೆದ ಪರೀಕ್ಷೆಗಳನ್ನು ಬಿಟ್ಟು ಉಳಿದ ವಿಷಯಗಳ ಪರೀಕ್ಷೆಗೆ ಶಿಕ್ಷಣ ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ. ಮಾರ್ಚ್ 25ರ ಸೋಮವಾರದಿಂದಲೇ ಪರೀಕ್ಷೆಗಳು ಆರಂಭವಾಗಲಿವೆ.
ಮಾರ್ಚ್ 25 ರಿಂದ ರಾಜ್ಯದ್ಯಂತ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಇಲ್ಲದ ದಿನ ಮಾತ್ರ ಬೆಳಗ್ಗೆ ಪರೀಕ್ಷೆ ನಡೆಯಲಿದೆ. ಉಳಿದ ದಿನ ಮಧ್ಯಾಹ್ನದ ಅವಧಿಯಲ್ಲಿ ಪರೀಕ್ಷೆ ನಡೆಸಲಾಗುವುದು.
ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯುವ ದಿನ ಮಧ್ಯಾಹ್ನ 2:30ಕ್ಕೆ, ಎಸ್.ಎಸ್.ಎಲ್.ಸಿ. ಪರೀಕ್ಷೆ ಇಲ್ಲದ ದಿನ ಬೆಳಗ್ಗೆ 10 ಗಂಟೆಗೆ ಪರೀಕ್ಷೆ ನಡೆಸಲಾಗುವುದು .
5ನೇ ತರಗತಿ ಮಕ್ಕಳಿಗೆ ಮಾರ್ಚ್ 25ರಂದು ಪರಿಸರ ಅಧ್ಯಯನ, ಮಾರ್ಚ್ 26ರಂದು ಗಣಿತ ವಿಷಯದ ಪರೀಕ್ಷೆ ನಡೆಯಲಿದೆ.
8ನೇ ತರಗತಿಯ ಮಕ್ಕಳಿಗೆ ಮಾರ್ಚ್ 25 ತೃತೀಯ ಭಾಷೆ, ಮಾರ್ಚ್ 26 ಗಣಿತ, ಮಾರ್ಚ್ 27 ವಿಜ್ಞಾನ, ಮಾರ್ಚ್ 28 ಸಮಾಜ ವಿಜ್ಞಾನ ವಿಷಯದ ಪರೀಕ್ಷೆ ನಡೆಯಲಿದೆ.
9ನೇ ತರಗತಿಯ ಮಕ್ಕಳಿಗೆ ಮಾರ್ಚ್ 25 ತೃತೀಯ ಭಾಷೆ, ಮಾರ್ಚ್ 26 ಗಣಿತ, ಮಾರ್ಚ್ 27 ವಿಜ್ಞಾನ, ಮಾರ್ಚ್ 28 ಸಮಾಜ ವಿಜ್ಞಾನ ವಿಷಯದ ಪರೀಕ್ಷೆಗಳು ನಡೆಯಲಿವೆ.