ಬ್ಲೇಡ್ ರನ್ನರ್’ ಖ್ಯಾತಿಯ ಹಾಲಿವುಡ್ ನಟ ಎಂ ಎಮ್ಮೆಟ್ ವಾಲ್ಷ್ (88) ಹೃದಯ ಸ್ತಂಭನದಿಂದ ವರ್ಮೊಂಟ್ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಅವರ ಮ್ಯಾನೇಜರ್ ಸ್ಯಾಂಡಿ ಜೋಸೆಫ್ ಎಪಿಗೆ ತಿಳಿಸಿದ್ದಾರೆ.
ನಟನಿಗೆ 88 ವರ್ಷ ವಯಸ್ಸಾಗಿತ್ತು.ವಾಲ್ಷ್ ಗಾಢವಾದ ಪಾತ್ರಗಳನ್ನು ನಿರ್ವಹಿಸಲು ಹೆಸರುವಾಸಿಯಾಗಿದ್ದರು. ಅವರ ಅತ್ಯಂತ ಮೆಚ್ಚುಗೆ ಪಡೆದ ಪಾತ್ರಗಳಲ್ಲಿ ಬ್ಲಡ್ ಸಿಂಪಲ್ ಒಂದು, ಇದಕ್ಕಾಗಿ ಅವರು ಅತ್ಯುತ್ತಮ ನಾಯಕ ಪ್ರಶಸ್ತಿ ಪಡೆದಿದ್ದರು. ತಮ್ಮ ಮೊದಲ ಫಿಲ್ಮ್ ಇಂಡಿಪೆಂಡೆಂಟ್ ಸ್ಪಿರಿಟ್ ಪ್ರಶಸ್ತಿಯನ್ನು ಪಡೆದಿದ್ದರು.
ಕಾರ್ಲ್ ರೈನರ್ ನಿರ್ದೇಶನದ 1979ರಲ್ಲಿ ಬಿಡುಗಡೆಯಾದ ದಿ ಜರ್ಕ್ ಚಿತ್ರದಲ್ಲಿ ವಾಲ್ಷ್ ಸ್ನೈಪರ್ ಪಾತ್ರವನ್ನು ನಿರ್ವಹಿಸಿದರು. ಇದರಲ್ಲಿ ಸ್ಟೀವ್ ಮಾರ್ಟಿನ್, ಬರ್ನಡೆಟ್ ಪೀಟರ್ಸ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.1982ರಲ್ಲಿ ಬಿಡುಗಡೆಯಾದ ಬ್ಲೇಡ್ ರನ್ನರ್ ನಲ್ಲಿ, ವಾಲ್ಷ್ ಪೊಲೀಸ್ ಕ್ಯಾಪ್ಟನ್ ಪಾತ್ರವನ್ನು ನಿರ್ವಹಿಸಿದ್ದಾರೆ.