ಗಾಝಾ ಪಟ್ಟಿಯ ಶಿಫಾ ಆಸ್ಪತ್ರೆಯ ಸುತ್ತ ಕಳೆದ ಒಂದು ದಿನದಲ್ಲಿ ನಡೆದ ಹೋರಾಟದಲ್ಲಿ 50 ಕ್ಕೂ ಹೆಚ್ಚು ಫೆಲೆಸ್ತೀನೀಯರನ್ನು ಕೊಂದಿರುವುದಾಗಿ ಇಸ್ರೇಲ್ ಮಿಲಿಟರಿ ಗುರುವಾರ ತಿಳಿಸಿದೆ.ಶಿಫಾ ಆಸ್ಪತ್ರೆಯಲ್ಲಿ ತನ್ನ ನಿಖರವಾದ ಕಾರ್ಯಾಚರಣೆಯ ಚಟುವಟಿಕೆಯನ್ನು ಮುಂದುವರಿಸುವುದಾಗಿ ಮಿಲಿಟರಿ ಹೇಳಿದೆ.
ಇದರ ನಡುವೆ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಜೆನಿನ್ ಪಟ್ಟಣದ ಬಳಿಯ ಉತ್ತರ ಪಶ್ಚಿಮ ದಂಡೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕನಿಷ್ಠ ಮೂವರು ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ಲಾಮಿಕ್ ಜಿಹಾದ್ ಗುಂಪು ಮೃತ ಮೂವರನ್ನು ಸದಸ್ಯರೆಂದು ಹೇಳಿಕೊಂಡಿದೆ. ಗಾಝಾ ಪಟ್ಟಿಯ ಅತಿದೊಡ್ಡ ಆಸ್ಪತ್ರೆಯ ಮೇಲೆ ಮೂರನೇ ದಿನವೂ ದಾಳಿ ನಡೆಯುತ್ತಿರುವಾಗ ವೈಮಾನಿಕ ದಾಳಿ ನಡೆದಿದೆ. ನೂರ್ ಶಾಮ್ಸ್ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯ ಶವವನ್ನು ಫೆಲೆಸ್ತೀನಿಯರು ಗುರುವಾರ ಸ್ಥಳಾಂತರಿಸಿದ್ದಾರೆ.