ದೋಸೆ ತಿನ್ನಲು ಹೋಗಿ ಬೆಚ್ಚಿ ಬಿದ್ದ ಮಹಿಳೆ: ಒಂದೇ ದೋಸೆಯಲ್ಲಿ 8 ಜಿರಳೆ ಪತ್ತೆ

ನವದೆಹಲಿ: ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ(ಸಿಪಿ) ಹೆಸರಾಂತ ಮದ್ರಾಸ್ ಕಾಫಿ ಹೌಸ್‌ನಲ್ಲಿ ದೋಸೆಯಲ್ಲಿ ಒಂದಲ್ಲ ಎಂಟು ಜಿರಳೆಗಳು ಕಂಡು ಬಂದಿದ್ದು, ಆಘಾತಕ್ಕೊಳಗಾದ ಮಹಿಳೆ ವಿಡಿಯೋ ಹಂಚಿಕೊಂಡಿದ್ದಾರೆ.

ಇಶಾನಿ ಅವರು ಇನ್‌ ಸ್ಟಾಗ್ರಾಮ್‌ ಪೋಸ್ಟ್‌ ನಲ್ಲಿ ತಮಗಾದ ಅನುಭವದ ವಿಡಿಯೋ ಹಂಚಿಕೊಂಡಿದ್ದಾರೆ. ಇಶಾನಿ ಮತ್ತು ಅವರ ಸ್ನೇಹಿತ ರೆಸ್ಟೋರೆಂಟ್‌ ನಲ್ಲಿ ದಕ್ಷಿಣ ಭಾರತದ ಊಟ ಸವಿಯಲು ಹೋದಾಗ ಈ ಬೆಳವಣಿಗೆ ನಡೆದಿದೆ. ಇಶಾನಿ ದೋಸೆ ತಿನ್ನುವಾಗ ಅದರಲ್ಲಿ ಏನೋ ಇದೆ ಗೊತ್ತಾಗಿದೆ. ಪರಿಶೀಲಿಸಿದಾಗ ಜಿರಳೆ ಕಂಡು ಬಂದಿದೆ. ಸೂಕ್ಷ್ಮವಾಗಿ ಪರಿಶೀಲಿಸಿದಾಗ 8 ಜಿರಳೆಗಳು ಇರುವುದು ಕಂಡು ಬಂದಿದೆ.

ನೆನಪಿಸಿಕೊಂಡರೆ ನನ್ನ ಹೃದಯ ಒಡೆಯುತ್ತದೆ ಎಂದು ಇಶಾನಿ ತಮ್ಮ ಪೋಸ್ಟ್‌ ನಲ್ಲಿ ತಿಳಿಸಿದ್ದಾರೆ.

ಆಕೆಯ ಇನ್‌ಸ್ಟಾಗ್ರಾಮ್ ಪೋಸ್ಟ್ ರೆಸ್ಟೋರೆಂಟ್‌ನ ಅಡುಗೆಮನೆಯ ಅನೈರ್ಮಲ್ಯ ಪರಿಸ್ಥಿತಿಗಳನ್ನು ವಿವರಿಸಿದೆ. ಹೆಸರಾಂತ ರೆಸ್ಟೊರೆಂಟ್ ಈ ರೀತಿ ಅಸಡ್ಡೆಯಿಂದ ಏಕೆ ವರ್ತಿಸುತ್ತದೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಇಶಾನಿ ಹೇಳಿದ್ದು, ಆಹಾರ ಸುರಕ್ಷತೆಯ ಹಕ್ಕನ್ನು ಒತ್ತಿ ಹೇಳಿದ್ದಾರೆ.

https://www.instagram.com/ishanigram/

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read