HomeEntertainmentಸಿನಿ ಪ್ರೇಕ್ಷಕರ ಗಮನ ಸೆಳೆದ 'ದಿಲ್ ಖುಷ್' ಚಿತ್ರದ ಟ್ರೈಲರ್

ಸಿನಿ ಪ್ರೇಕ್ಷಕರ ಗಮನ ಸೆಳೆದ ‘ದಿಲ್ ಖುಷ್’ ಚಿತ್ರದ ಟ್ರೈಲರ್

ಪ್ರಮೋದ್ ಜಯ ರಚಿಸಿ ನಿರ್ದೇಶಿಸಿರುವ ‘ದಿಲ್ ಖುಷ್’ ಚಿತ್ರ  ಇದೇ ಮಾರ್ಚ್ 22ಕ್ಕೆ ತೆರೆ ಮೇಲೆ ಅಪ್ಪಳಿಸಲಿದೆ. ದಿಲ್ ಖುಷ್ ಚಿತ್ರ ತಂಡ ನಿನ್ನೆ ಜಯ ಪ್ರಭಾ ಸ್ಟುಡಿಯೋಸ್ ಯುಟ್ಯೂಬ್ ಚಾನೆಲ್ ನಲ್ಲಿ ಟೈಲರ್ ಬಿಡುಗಡೆ ಮಾಡಿದ್ದು, ಸಿನಿಪ್ರೇಕ್ಷಕರಿಂದ ಮೆಚ್ಚುಗೆಯ ಸುರಿಮಳೆಯೇ ಹರಿದು ಬಂದಿದೆ. ಈ ಟೈಲರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಂಡಿದೆ.

ರೋಮ್ಯಾಂಟಿಕ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ  ಈ ಚಿತ್ರವನ್ನು ಜಯಪ್ರಭ ಕಲರ್ ಪ್ರೇಮ್ಸ್ ನಿರ್ಮಾಣ ಮಾಡಿದ್ದು, ರಂಜಿತ್ ಮತ್ತು ಕಿರುತೆರೆ ನಟಿ ಸ್ಪಂದನ ಸೋಮಣ್ಣ ಪ್ರಮುಖ ಪಾತ್ರದಲ್ಲಿದ್ದಾರೆ. ರಂಗಾಯಣ ರಘು, ಅರುಣ ಬಾಲರಾಜ್, ಧರ್ಮಣ್ಣ ಕಡೂರು, ರಾಘು ರಾಮನ ಕೊಪ್ಪ ಉಳಿದ ಪಾತ್ರವರ್ಗದಲ್ಲಿದ್ದಾರೆ. ಪ್ರಸಾದ್ ಕೆ ಶೆಟ್ಟಿ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಜ್ಞಾನೇಶ್ ಬಿ ಮಾತಾಡ್ ಸಂಕಲನ, ನಿವಾಸ್ ನಾರಾಯಣ್ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular