alex Certify ಹೊಸ ಎಲೆಕ್ಟ್ರಿಕ್ ವಾಹನ ನೀತಿಗೆ ಕೇಂದ್ರ ಸರ್ಕಾರ ಅನುಮೋದನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಎಲೆಕ್ಟ್ರಿಕ್ ವಾಹನ ನೀತಿಗೆ ಕೇಂದ್ರ ಸರ್ಕಾರ ಅನುಮೋದನೆ

ನವದೆಹಲಿ: ದೇಶವನ್ನು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯ ಕೇಂದ್ರ ಸ್ಥಾನವನ್ನಾಗಿ ಮಾಡುವ ಉದ್ದೇಶ ಹೊಂದಿರುವ ಹೊಸ ಇ- ವೆಹಿಕಲ್ ನೀತಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಹೊಸ ಎಲೆಕ್ಟ್ರಿಕ್ ವಾಹನ ನೀತಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಕನಿಷ್ಠ 4150 ಕೋಟಿ ರೂ.ಡಿಕೆ ಮಾಡುವ ಕಂಪನಿಗಳಿಗೆ ಸೀಮಾ ಸುಂಕದಲ್ಲಿ ವಿನಾಯಿತಿ ಸೇರಿ ಹಲವು ಆಫರ್ ನೀಡಲಾಗಿದೆ. ವಿದೇಶಗಳಿಂದ ಕಡಿತ ಮಾಡಿದ ಸೀಮಾ ಸುಂಕದ ದರದಲ್ಲಿ ಸೀಮಿತ ಪ್ರಮಾಣದಲ್ಲಿ ವಾಹನಗಳ ಆಮದಿಗೆ ಅವಕಾಶ ಕಲ್ಪಿಸಲಾಗುತ್ತದೆ.

ಉತ್ಪಾದನಾ ಘಟಕ ನಿರ್ಮಾಣ ಆರಂಭದ ಮೂರು ವರ್ಷದೊಳಗೆ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕಿದ್ದು, 5 ವರ್ಷದವರೆಗೆ ಶೇಕಡ 50ರಷ್ಟು ವಾಹನಗಳನ್ನು ಸ್ಥಳೀಯವಾಗಿಯೇ ಮಾರಾಟ ಮಾಡಬೇಕು. 30 ಲಕ್ಷ ರೂ. ಗಿಂತ ಹೆಚ್ಚಿನ ಬೆಲೆಯ ಇ- ವಾಹನ ಗಳನ್ನು ಶೇಕಡ 15ರಷ್ಟು ಸೀಮಾ ಸುಂಕದಡಿ ಆಮದು ಮಾಡಿಕೊಳ್ಳಬಹುದಾಗಿದೆ.

ಹಾಲಿ ಇಂತಹ ವಾಹನಗಳಿಗೆ ಸೀಮಾ ಸುಂಕ ಶೇಕಡ 70 ರಿಂದ ಶೇಕಡ 100ರವರೆಗೂ ಇದೆ. 5 ವರ್ಷದವರೆಗೆ ವಿನಾಯಿತಿ ನೀಡಲಾಗುವುದು. ವಾರ್ಷಿಕ ಗರಿಷ್ಠ 8000 ವಾಹನ ಮಾತ್ರ ವಿದೇಶಗಳಿಂದ ಆಮದು ಮಾಡಿಕೊಳ್ಳಬಹುದಾಗಿದೆ. 2030ರ ವೇಳೆಗೆ ವಾರ್ಷಿಕವಾಗಿ ಒಂದು ಕೋಟಿ ಈ ವಾಹನಗಳನ್ನು ಮಾರಾಟ, ಉದ್ಯಮದಲ್ಲಿ 5 ಕೋಟಿ ಉದ್ಯೋಗ ಸೃಷ್ಟಿ ಗುರಿ ಹೊಂದಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...