ಮಡಿಕೇರಿ: ಭಾರಿ ಬಿಸಿಲ ನಡುವೆಯೇ ಕೊಡಗು ಜಿಲ್ಲೆಯ ಕಲವು ಕಡೆ ಸಾಧಾರಣ ಮಳೆಯಾಗಿದೆ. ಬುಧವಾರ ಮೂರ್ನಾಡು ವ್ಯಾಪ್ತಿಯ ಕಿಗ್ಗಾಲ ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಮಡಿಕೇರಿ ಸೇರಿ ಜಿಲ್ಲೆಯ ಹಲವು ಕಡೆ ಮೋಡ ಕವಿದ ವಾತಾವರಣ ಕಂಡು ಬಂದಿದೆ. ಎರಡು ಮೂರು ದಿನಗಳಲ್ಲಿ ಮಳೆ ಆಗುವ ಸಂಭವವಿದೆ.
ಕಾಫಿ, ಕರಿಮೆಣಸು ಸೇರಿ ರೈತರ ಬೆಳೆಗಳಿಗೆ ಮಳೆ ಅಗತ್ಯವಾಗಿ ಬೇಕಾಗಿದೆ. ರೈತರು ಕೃತಕ ನೀರಾವರಿಯ ಮೊರೆ ಹೋಗಿದ್ದಾರೆ. ಬಿಸಿಲ ಹೊಡೆತಕ್ಕೆ ಬಾಡಿ ಹೋಗಿದ್ದ ಬೆಳೆಗಳಿಗೆ ಸಾಧಾರಣ ಮಳೆಯಿಂದ ಅನುಕೂಲವಾಗಿದೆ.
ರ್ಚ್ 17ರ ವರೆಗೆ ಸ್ವಚ್ಛ ವಾತಾವರಣವಿದ್ದು, ಮಳೆ ಬರುವ ಸಂಭವ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.