HomeKarnatakaBIG NEWS: ಹುಕ್ಕಾ ಬಾರ್, ತಂಬಾಕು ಮಳಿಗೆಗಳ ಮೇಲೆ ಪೊಲೀಸ್ ದಾಳಿ; ಇಬ್ಬರು ಅರೆಸ್ಟ್

BIG NEWS: ಹುಕ್ಕಾ ಬಾರ್, ತಂಬಾಕು ಮಳಿಗೆಗಳ ಮೇಲೆ ಪೊಲೀಸ್ ದಾಳಿ; ಇಬ್ಬರು ಅರೆಸ್ಟ್

ಬೆಳಗಾವಿ: ರಾಜಧಾನಿ ಬೆಂಗಳೂರಿನ ಬಳಿಕ ಇದೀಗ ಪೊಲೀಸರು ಗಡಿ ಜಿಲ್ಲೆ ಬೆಳಗಾವಿಯಲ್ಲಿ ಹುಕ್ಕಾ ಬಾರ್, ತಂಬಾಕು ಮಳಿಗೆಗಳ ಮೇಲೆ ದಾಳಿ ನಡೆಸಿದ್ದಾರೆ.

ಬೆಳಗಾವಿಯ ಟಿಳಕವಾಡಿಯಲ್ಲಿರುವ ಗ್ಯಾಲರಿ ಸ್ಮೋಕ್ & ಚಾಕಲೇಟ್ ಗಿಫ್ಟ್ಸ್ & ಮೋರ್ ಸೇರಿದಂತೆ ಹಲವೆಡೆ ದಾಳಿ ನಡೆಸಲಾಗಿದೆ. ಲೈಸನ್ಸ್ ಇಲ್ಲದೇ ಮಳಿಗೆಯಲ್ಲಿ ಸುರಂಗ ಮಾರ್ಗ ನಿರ್ಮಿಸಿ ಹುಕ್ಕಾ ಬಾರ್ ನಡೆಸಲಾಗುತ್ತಿತ್ತು. ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಈ ವೇಳೆ ನಿಷೇಧಿತ ಇ-ಸಿಗರೇಟ್, ಹುಕ್ಕಾ ರೋಲ್ ಪೇಪರ್, ಚಾರ್ಕೋ ಕೋಲ್, ವಿದೇಶಿ ಸಿಗರೇಟ್, ತಂಬಾಕು ಪ್ಯಾಕೇಟ್ ಸೇರಿದಂತೆ 5.53 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ದಾಳಿ ವೇಳೆ ಮಂಗಳೂರು ಮೂಲದ ಅಬುಬಕ್ಕರ್ ಸಿದ್ದಿಕ್, ಶಬಾಬ್ ಅಹ್ಮದ್ ಎಂಬುವವರನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular