ಕೆ ಎಮ್ ರಾಘು ನಿರ್ದೇಶನದ ‘ಜಸ್ಟ್ ಪಾಸ್’ ಚಿತ್ರದ ”ಎಕ್ಸ್ ಕ್ಯೂಸ್ ಮಿ ಕೇಳಿ” ಎಂಬ ಲಿರಿಕಲ್ ಹಾಡು ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸಿತ್ತು. ಇದೀಗ ಸಂಪೂರ್ಣ ವಿಡಿಯೋ ಹಾಡನ್ನು ಬಿಡುಗಡೆ ಮಾಡಲಾಗಿದೆ. ಖ್ಯಾತ ನಟ ಶರಣ್ ಈ ಹಾಡಿಗೆ ಧ್ವನಿಯಾಗಿದ್ದು, ಹರ್ಷವರ್ಧನ್ ರಾಜ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಡಾ. ವಿ ನಾಗೇಂದ್ರ ಪ್ರಸಾದ್ ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ.
ಈ ಚಿತ್ರವನ್ನು ರಾಯ್ಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಕೆವಿ ಶಶಿಧರ್ ನಿರ್ಮಾಣ ಮಾಡಿದ್ದು, ಶ್ರೀ, ಪ್ರಣತಿ, ಸಾಧು ಕೋಕಿಲ, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ಗೋವಿಂದೇಗೌಡ, ಪ್ರಕಾಶ್ ತುಮ್ಮಿ ನಾಡ್, ಮತ್ತು ದಾನಪ್ಪ ಸೇರಿದಂತೆ ಹಲವರ ತಾರಾಬಳಗವಿದೆ.
ಕೆಎಮ್ ಪ್ರಕಾಶ್ ಸಂಕಲನ, ಸುಜಯ್ ಕುಮಾರ್ ಬಾವಿಕಟ್ಟೆ ಛಾಯಗ್ರಹಣ, ಕೆ ಎಮ್ ರಾಘು ಮತ್ತು ರಘು ನಿಡುವಳ್ಳಿ ಸಂಭಾಷಣೆ, ಅರ್ಜುನ್ ಸಾಹಸ ನಿರ್ದೇಶನವಿದೆ.