ನಿನ್ನೆ ದೆಹಲಿಯಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ ನ 19ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ಎದುರು ಏಳು ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಸೆಮಿ ಫೈನಲ್ ಗೆ ಎಂಟ್ರಿ ಕೊಟ್ಟಿದೆ. ಆರ್ಸಿಬಿ ತಂಡದ ಆಲ್ ರೌಂಡರ್ ಎಲ್ಲಿಸ್ ಪೆರ್ರಿ ಬೌಲಿಂಗ್ ದಾಳಿಗೆ ಮುಂಬೈ ಇಂಡಿಯನ್ಸ್ ತತ್ತರಿಸಿ ಹೋಗಿದೆ.
ಎಲ್ಲಿಸ್ ಪೆರ್ರಿ ನಿನ್ನೆಯ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಪ್ರಮುಖ ಬೌಲರ್ಗಳು ವಿಕೆಟ್ ತೆಗೆಯುವಲ್ಲಿ ವಿಫಲವಾದಾಗ ಬೌಲಿಂಗ್ ಮಾಡಿದ ಇವರು ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದಾರೆ. ಕೇವಲ 15 ರನ್ಗಳನ್ನು ನೀಡಿ ಆರು ವಿಕೆಟ್ ಕಬಳಿಸಿದ್ದಾರೆ.
ಈ ಮೂಲಕ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಆರ್ ವಿಕೆಟ್ ಪಡೆದ ಮೊದಲಿಗರಾಗಿದ್ದಾರೆ. ಕೇವಲ ಬೌಲಿಂಗ್ ಮಾತ್ರವಲ್ಲದೆ 40 ರನ್ ಬಾರಿಸುವ ಮೂಲಕ ಬ್ಯಾಟಿಂಗ್ ನಲ್ಲೂ ಮಿಂಚಿದ್ದಾರೆ.