HomeInternationalರಂಜಾನ್ ಉಪವಾಸ ಸಮಯದಲ್ಲೇ ಘೋರ ದುರಂತ: ಕಟ್ಟಡ ಕುಸಿದು 9 ಜನ ಸಾವು

ರಂಜಾನ್ ಉಪವಾಸ ಸಮಯದಲ್ಲೇ ಘೋರ ದುರಂತ: ಕಟ್ಟಡ ಕುಸಿದು 9 ಜನ ಸಾವು

ಮುಲ್ತಾನ್: ಮಧ್ಯ ಪಾಕಿಸ್ತಾನದಲ್ಲಿ ಮಂಗಳವಾರ ಮೂರು ಅಂತಸ್ತಿನ ವಸತಿ ಕಟ್ಟಡ ಕುಸಿದು ಒಂಬತ್ತು ಜನರು ಸಾವನ್ನಪ್ಪಿದ್ದಾರೆ.

ಪೂರ್ವ ಪಂಜಾಬ್ ಪ್ರಾಂತ್ಯದ ಮುಲ್ತಾನ್ ನಗರದಲ್ಲಿ ಕುಸಿದ ಕಟ್ಟಡದ ಅವಶೇಷಗಳು ಸಮೀಪದ ಮನೆಗಳ ಮೇಲೂ ಬಿದ್ದಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದ್ದಾರೆ ಎಂದು ಹಿರಿಯ ಸರ್ಕಾರಿ ಅಧಿಕಾರಿ ರಿಜ್ವಾನ್ ಖದೀರ್ ಹೇಳಿದ್ದಾರೆ.

ಮೃತರ ಸಂಬಂಧಿ ಅಶ್ಫಾಕ್ ಮಲಿಕ್, “ಸೆಹ್ರಿ (ಉಪವಾಸ) ಸಮಯದಲ್ಲಿ” ಮುಂಜಾನೆ ಕಟ್ಟಡವು ಕುಸಿದಿದೆ ಎಂದು ಹೇಳಿದರು. “ಈ ಘಟನೆಯಲ್ಲಿ ನನ್ನ ಸೋದರಳಿಯ ಮತ್ತು ಸೊಸೆ ಮತ್ತು ಅವರ ಮಕ್ಕಳು ಮೃತಪಟ್ಟಿದ್ದಾರೆ. ಇದು ಸೆಹ್ರಿ(ಉಪವಾಸ) ಸಮಯದಲ್ಲಿ ಸಂಭವಿಸಿದೆ. ಮುಂಜಾನೆ ನನ್ನ ಸೋದರಳಿಯನ ಮನೆಯ ಮೇಲೆ ಸಿಡಿದ ಗ್ಯಾಸ್ ಸಿಲಿಂಡರ್‌ ನಿಂದ ನನ್ನ ಸೋದರಳಿಯ ಮನೆಯ ಮುಂದಿನ ಮೂರು ಅಂತಸ್ತಿನ ಕಟ್ಟಡ ಕುಸಿದಿದೆ. ನನ್ನ ಸೋದರಳಿಯನ ಇಡೀ ಕುಟುಂಬ ತೀರಿಕೊಂಡಿತು ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular