ಮೈಸೂರು: ಯದುವೀರ್ ಒಡೆಯರ್ ಗೆ ಬಿಜೆಪಿ ಟಿಕೆಟ್ ನೀಡಿದರೆ ಸ್ವಾಗತಿಸುತೇನೆ. ಬಿಜೆಪಿ ಕಾರ್ಯಕರ್ತನಾಗಿ ಅವರ ಪರ ನಾನು ಕೆಲಸ ಮಾಡುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಅರಮನೆಯ ಎಸಿ ರೂಂ ನಲ್ಲಿ ರಾಜನಾಗಿರುವ ಬದಲು ಪ್ರಜೆಗಳಂತೆ ಬದುಕಲು ಬಂದ್ರೆ ಸ್ವಾಗತಿಸದೇ ಇರಲು ಆಗುತ್ತಾ? ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.
ರಾಜ-ಪ್ರಜೆ ನಡುವೆ ವ್ಯತ್ಯಾಸ ತೆಗೆದು ಬಂದ್ರೆ. ರಾಜರೇ ಪ್ರಜೆಗಳ ಜೊತೆ ಇರಲು ಬಂದ್ರೆ ಸ್ವಾಗತಿಸುತ್ತೇವೆ. ಅರಮನೆ ಆಸ್ತಿ ವಿಚಾರದಲ್ಲಿ ಸರ್ಕಾರದ ನಡುವೆ ವ್ಯಾಜ್ಯವಿದೆ. ಅದರಲ್ಲಿ ಬಹುತೇಕ ಆಸ್ತಿಗಳು ಸಾರ್ವಜನಿಕರ ಬಳಕೆಯಲ್ಲಿದೆ. ಯದುವೀರ್ ಜನಪ್ರತಿನಿಧಿಯಾಗಿ ಜನರಿಗೆ ಬಿಟ್ಟು ಕೊಡಿಸ್ತಾರೆ. ಅರಮನೆಯಲ್ಲಿ ಆರಾಮವಾಗಿದ್ದ ವ್ಯಕ್ತಿ ಹೋರಾಟಕ್ಕೆ ಬರ್ತಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಹೋರಾಡಲು ಬೀದಿಗೆ ಬಂದ್ರೆ ಸಂತೋಷ… ಅರಮನೆ ವೈಭೋಗ ಬೇಡ, ಹೋರಾಟಕ್ಕೆ ಬರುತ್ತೇನೆ ಎಂದ್ರೆ ಸಂತೋಷ… ಠಾಣೆಗೆ ಬಂದು ಸಮಸ್ಯೆ ಬಗೆಹರಿಸುತ್ತೇನೆ ಎಂದ್ರೆ ಸಂತೋಷವಲ್ಲವೇ? ಸುಖದ ಸುಪ್ಪತ್ತಿಗೆಯಲ್ಲಿದ್ದವರನ್ನು ರಾಜಕೀಯಕ್ಕೆ ತಂದವರಿಗೆ ಥ್ಯಾಂಕ್ಸ್. ಮಹಾರಾಜರನ್ನು ರಾಜಕೀಯಕ್ಕೆ ತಂದ ನಮ್ಮ ಮುಖಂಡರಿಗೆ ಧನ್ಯವಾದ ಎಂದು ಹೇಳಿದ್ದಾರೆ.