ಕಾರವಾರ: ಸಂವಿಧಾನವನ್ನು ಬದಲಾವಣೆ ಮಾಡಬೇಕು ಎಂಬ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದ ಬಿಜೆಪಿ ಸಂಸದ ಅನಂತ್ ಕುಮಾರ್, ಹೆಗಡೆ ಇದೀಗ ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ. ಮಾಧ್ಯಮಗಳ ವಿರುದ್ಧ ಅವಾಚ್ಯಶಬ್ದಗಳಿಂದ ನಿಂದಿಸಿ ನಾಲಿಗೆ ಹರಿಬಿಟ್ಟಿರುವ ಘಟನೆ ನಡೆದಿದೆ.
ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಂಸದ ಅನಂತ್ ಕುಮಾರ್,ಸಂವಿಧಾನವನ್ನು ತಿದ್ದುಪಡಿ ಮಾಡಬೇಕಾದ್ರೆ ಮೂಲಭೂತ ಸಂವಿಧಾನವನ್ನೇ ಕಾಂಗ್ರೆಸ್ ನವರು ತಿದ್ದಿದರು. ಅದರಲ್ಲಿ ವಿಶೇಷವಾಗಿ ಬೇಡದಿರುವುದನ್ನು ತುರುಕಿದರು. ಸಂವಿಧಾನ ಬದಲಾವಣೆ ಮಾಡಬೇಕು ಎಂದರೆ ಲೋಕಸಭೆ, ರಾಜ್ಯಸಭೆಯಲ್ಲಿ ನಮಗೆ ಮೆಜಾರಿಟಿ ಇರಬೇಕು. ರಾಜ್ಯ ಸರ್ಕಾರದಲ್ಲಿಯೂ ಇರಬೇಕು ಆನಂತರ ನೋಡಿ ಹೇಗಿರುತ್ತೆ ಅಂತಾ ಎಂದು ಹೇಳುವ ಮೂಲಕ ಸಂವಿಧಾನ ತಿದ್ದುಪಡಿ ಮಾಡಬೇಕು ಎಂಬ ತಮ್ಮ ಹೇಳಿಕೆ ಬಗ್ಗೆ ಸಮರ್ಥನೆ ಮಾಡಿಕೊಳ್ಳುತ್ತಾ, ಮಾಧ್ಯಮಗಳು ಬೇಕಾದ್ದು ಬರೆದುಕೊಳ್ಳಲಿ ಆದರೆ ನಮ್ಮ ಹೇಳಿಕೆ, ನಮ್ಮ ನಿಲುವು ಅಛಲವಾಗಿರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಬೇಕಾದ್ದು ಚರ್ಚೆಯಾಗ್ಲಿ ನಾವು ಅಲುಗಾಡಬಾರದು ಆನೆ ನಡೆದಿದ್ದೇ ದಾರಿ ಎನ್ನುವಂತಿರಬೇಕು ಎಂದರು. ಇದೇ ವೇಳೆ ಮಾಧ್ಯಮನ್ನು ಅವಾಚ್ಯವಾಗಿ ನಿಂದಿಸಿದ್ದಾರೆ.
ಸಂವಿಧಾನ ಬದಲಾವಣೆ ಮಾಡಬೇಕು ಎಂಬ ಹೇಳಿಕೆ ನೀಡಿ ಸ್ವಪಕ್ಷದ ನಾಯಕರ ಕೆಂಗಣ್ಣಿಗೂ ಗುರಿಯಾಗಿದ್ದ ಸಂಸದ ಅನಂತ್ ಕುಮಾರ್ ಇದೀಗ ಮಾಧ್ಯಮಗಳನ್ನು ನಿಂದಿಸಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.