ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ಆರೋಪಿ ಒಂದು ಹಂತಕ್ಕೆ ಪತ್ತೆಯಾಗಿದ್ದಾನೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್ ಆರೋಪಿ ಒಂದು ಹಂತಕ್ಕೆ ಪತ್ತೆಯಾಗಿದ್ದಾನೆ, ಬಾಂಬ್ ಸ್ಪೋಟದ ತನಿಖೆ ಒಂದು ಹಂತಕ್ಕೆ ಬಂದಿದೆ. ಆರೋಪಿ ಒಂದು ಹಂತಕ್ಕೆ ಪತ್ತೆಯಾಗಿದ್ದಾನೆ, ಅದನ್ನ ಕರ್ನಫರ್ಮ್ ಮಾಡ್ಕೊಬೇಕು, ಯಾರು ಅಂತ ಸಂಜೆ ಒಳಗೆ ಗೊತ್ತಾಗುತ್ತದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ಬಾಂಬರ್ ಗಾಗಿ ಎನ್ ಐ ಎ ಅಧಿಕಾರಿಗಳು ತೀವ್ರ ಶೋಧ ನಡೆಸುತ್ತಿದ್ದಾರೆ.