ಬೆಂಗಳೂರು : ಕುಡಿಯುವ ನೀರನ್ನು ವಾಹನಗಳ ಸ್ವಚ್ಛತೆ, ಕೈದೋಟ, ಮನೋರಂಜನಾ ಕಾರಂಜಿ, ರಸ್ತೆ ನಿರ್ಮಾಣ, ರಸ್ತೆ ಸ್ವಚ್ಛತೆ, ಕಟ್ಟಡ ನಿರ್ಮಾಣಕ್ಕೆ ಬಳಸುವುದಕ್ಕೆ ಜಲಮಂಡಳಿ ನಿರ್ಬಂಧ ವಿಧಿಸಿದೆ. ಅಲ್ಲದೇ, ಚಿತ್ರಮಂದಿರ ಮತ್ತು ಮಾಲ್ಗಳಲ್ಲಿ ಕುಡಿಯುವ ನೀರನ್ನು ಬೇರೆ ಉದ್ದೇಶಗಳಿಗೆ ಬಳಸದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ನೀರಿನ ದುರ್ಬಳಕೆ ತಡೆಗಾಗಿ ವಿಧಿಸಿರುವ ನಿರ್ಬಂಧಗಳನ್ನು ಯಾರಾದರೂ ಉಲ್ಲಂಘಿಸುವುದು ಕಂಡುಬಂದರೆ, ಸಾರ್ವಜನಿಕರು 1916 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು. ಈ ಮಾಹಿತಿ ಆಧರಿಸಿ ಜಲಮಂಡಳಿ ಅಧಿಕಾರಿಗಳು, ನೀರು ಪೋಲು ಮಾಡಿದವರಿಗೆ ದಂಡ ವಿಧಿಸಲಿದ್ದಾರೆ.
ಪ್ರತಿ ಹನಿ ನೀರು ಅಮೂಲ್ಯ, ಕುಡಿಯುವ ನೀರನ್ನು ಅನ್ಯ ಉದ್ದೇಶಗಳಿಗೆ ಬಳಸದಿರಿ ವಾಹನಗಳ ಸ್ವಚ್ಛತೆ, ಗಿಡಗಳಿಗೆ, ರಸ್ತೆ ಸ್ವಚ್ಛತೆ ಮತ್ತಿತರ ಉದ್ದೇಶಗಳಿಗೆ ಕುಡಿಯುವ ನೀರನ್ನು ಬಳಸದಿರಿ,1916 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿ, ನೀರಿನ ದುರ್ಬಳಕೆ ತಡೆಗೆ ಕೈಜೋಡಿಸಿ ಎಂದು ಸರ್ಕಾ ರ ಮನವಿ ಮಾಡಿದೆ.